ಕೋಲ್ಕತಾ: ಭಾರತದ ಖ್ಯಾತ ಸ್ನೂಕರ್ ತಾರೆ ಹಾಗೂ 12 ಬಾರಿ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾಣಿ ಬಿಆರ್‌ಸಿ ಗ್ಲೋಸ್ಟರ್ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಂಕಜ್ ಆಡ್ವಾಣಿ ತಮ್ಮ ಎದುರಾಳಿ ಧ್ರುವ್ ಸಿತ್ವಾಲ ವಿರುದ್ಧ 5-0 (150-28, 150-00, 153-00, 150-81, 153-00) ಫ್ರೇಮ್‌ಗಳ ಅಂತರದ ಗೆಲವು ದಾಖಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಈ ಮೂಲಕ ಕರ್ನಾಟಕದ ಆಟಗಾರ 7ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿ ಕೊಂಡರು. ಹೊಸ ಋತುವಿನಲ್ಲಿ ಶುಭಾರಂಭ ಮಾಡಿದ್ದಾರೆ.
ಪಂದ್ಯದ ಆರಂಭದಿಂದ ಅಂತ್ಯದವರೆಗೂ ಯಾವುದೇ ತೊಂದರೆ ಎದುರಿಸದ ಆಡ್ವಾಣಿ ಪಂದ್ಯದಲ್ಲಿ ಪ್ರಾಬಲ್ಯ ಮೆರೆದು ಜಯದ ಹಾರವನ್ನು ಕೊರಳಿಗೆ ಹಾಕಿಕೊಂಡರು.
ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿದ ಪಂಕಜ್ ಎರಡನೇ ಹಾಗೂ ಮೂರನೇ ಫ್ರೇಮ್‌ನಲ್ಲಿ ಕ್ರಮವಾಗಿ ಒಂದೇ ಬ್ರೇಕ್‌ನಲ್ಲಿ 150 ಹಾಗೂ 13 ಅಂಕಗಳನ್ನು ಗಳಿಸುವ ಮೂಲಕ ಅದ್ಭುತ ಪ್ರದರ್ಶನ ತೋರಿದರು.
ಸತತವಾಗಿ ಎರಡು ಬಾರಿ 150ಕ್ಕೂ ಹೆಚ್ಚು ಅಂಕಗಳಿಸಿದ್ದು, ಫೈನಲ್‌ನಲ್ಲಿ ಈ ಉತ್ತಮ ಪ್ರದರ್ಶನದಿಂದ ಸಂತೋಷವಾಗಿದೆ ಎಂದು ಪಂದ್ಯದ ಬಳಿಕ ಪಂಕಜ್ ಹರ್ಷ ವ್ಯಕ್ತಪಡಿಸಿದರು.