ಸಾನಿಯಾ ಮಿರ್ಜಾ 
ಕ್ರೀಡೆ

ಡಬಲ್ಸ್‌ನಲ್ಲಿ ಶ್ರೇಷ್ಠ 5ನೇ ಕ್ರಮಾಂಕ ಸರಿಗಟ್ಟಿದ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ಚೆಲುವೆ ಸಾನಿಯಾ ಮಿರ್ಜಾ ನೂತನ ಡಬ್ಲ್ಯೂಟಿಎ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ...

ನವದೆಹಲಿ: ಭಾರತದ ಟೆನಿಸ್ ಚೆಲುವೆ ಸಾನಿಯಾ ಮಿರ್ಜಾ ನೂತನ ಡಬ್ಲ್ಯೂಟಿಎ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಜೀವನಶ್ರೇಷ್ಠ ಐದನೇ ಕ್ರಮಾಂಕವನ್ನು ಸರಿಗಟ್ಟಿದ್ದಾರೆ.

ಸಿಡ್ನಿಯಲ್ಲಿ ನಡೆದ ಡಬ್ಲ್ಯೂಟಿಎ ಅಪಿಯಾ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ಬೆಥಾನಿ ಮಾಟೆಕ್ ಜೊತೆಗೂಡಿ ಸಾನಿಯಾ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಸಾಧನೆಯ ಹಿನ್ನೆಲೆಯಲ್ಲಿ ಸಾನಿಯಾ ರ್ಯಾಂಕಿಂಗ್ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ.ಭಾರತೀಯ ಆಟಗಾರ್ತಿ ಒಟ್ಟು 470 ಅಂಕಗಳನ್ನು ಗಳಿಸುವ ಮೂಲಕ, ಈ ಮುನ್ನ ಐದನೇ ಸ್ಥಾನದಲ್ಲಿದ್ದ ತಮ್ಮದೇ ಡಬಲ್ಸ್ ಜೊತೆಗಾರ್ತಿ ಸೂ-ವೀ ಶೀ ಅವರನ್ನು ಆರನೇ ಸ್ಥಾನಕ್ಕಿಳಿಸಿದ್ದಾರೆ.

ಸೋಮವಾರ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕದ ಗೌರವದೊಂದಿಗೆ ಸಾನಿಯಾ, ಸೂ-ವೀ ಶೀ ಜೊತೆಗೂಡಿ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಪಾಲ್ಗೊಳ್ಳಲಿದ್ದಾರೆ. ಮಹಿಳೆಯರ ಡಬಲ್ಸ್‌ನ ತಮ್ಮ ಮೊದಲ ಸುತ್ತನ ಪಂದ್ಯದಲ್ಲಿ ಸಾನಿಯಾ-ಸೂ ಅವರಿಗೆ ಅರ್ಜೆಂಟೀನಾದ ಮಾರಿಯಾ ಇರಿಗೊಯೆನ್ ಮ್ತತು ಸ್ವಿಸ್‌ನ ರೊಮೆನಿಯಾ ಓಪ್ರಾಂಡಿ ಅವರ ಸವಾಲು ಎದುರಾಗಲಿದೆ.

ಸಿಡ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಹೊಸ ಋತುವನ್ನು ಉತ್ತಮವಾಗಿ ಆರಂಭಿಸಿರುವ ಸಾನಿಯಾ, ಆಸ್ಟ್ರೇಲಿಯನ್ ಓಪನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜತೆಗೆ ರ್ಯಾಂಕಿಂಗ್‌ನಲ್ಲಿ ನಂಬರ್ ಒನ್ ಸ್ಥಾನದ ತಮ್ಮ ಗುರಿ ಈಡೇರಿಕೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಇಟಲಿಯ ಸಾರಾ ಎರಾನಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಕ್ರಮಾಂಕದಲ್ಲಿದ್ದಾರೆ. ಇದೇ ದೇಶದ ರಾಬರ್ಟಾ ವಿನ್ನಿ ಎರಡನೇ, ಚೀನಾದ ಶಾಯಿ ಪೆಂಗ್ ಮೂರನೇ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ನಾಲ್ಕನೇ ಕ್ರಮಾಂಕದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!