ಕ್ರೀಡೆ

ತೃಪ್ತಿ ತಂದ ಇನ್ನಿಂಗ್ಸ್

Srinivasamurthy VN

ಮೈಸೂರು: ರಣಜಿಯ ಮೊದಲ ಋತುವಿನಲ್ಲೇ ಬರೋಡಾಗೆ ಹೊಸ ಭರವಸೆ ಮೂಡಿಸಿರುವ ದೀಪಕ್ ಹೂಡಾ, ಮಾನಸ ಗಂಗೋತ್ರಿಯ ಕ್ರೀಡಾಂಗಣದಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯದ ಮೂಲಕ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದರು.

ತಂಡ ಸಂಕಷ್ಟಕ್ಕೆ ಗುರಿಯಾಗಿದ್ದಾಗ, ಒತ್ತಡಕ್ಕೊಳಗಾಗದೇ, ದೊಡ್ಡ ಇನ್ನಿಂಗ್ಸ್ ಕಟ್ಟಿದರು. ಮೊದಲ ದಿನದಾಟದ ನಂತರ ಮಾತನಾಡಿದ ದೀಪಕ್, ಪಿಚ್ ಬೌಲರ್‌ಗಳಿಗೆ ನೆರವು ನೀಡುತ್ತಿತ್ತು. ಹಾಗಾಗಿ, ಆರಂಭದಲ್ಲಿ ಕ್ರೀಸ್‌ಗೆ ಹೊಂದಿಕೊಂಡು, ನಂತರ ಉತ್ತಮವಾಗಿ ಆಡಿದೆ ಎಂದರು.

ಇದು ನನ್ನ ಮೊದಲ ರಣಜಿ ಋತು. 6ನೇ ಪಂದ್ಯದಲ್ಲಿ 2ನೇ ಶತಕ ಬಾರಿಸಿದ ತೃಪ್ತಿ ಇದೆ. ಅದೂ ಕೂಡ ತಂಡ ಒತ್ತಡದಲ್ಲಿ ಇದ್ದಾಗ ಆಡಿದ್ದು ಖುಷಿ ತಂದಿತು. ರಣಜಿ ಇಂಥ ವೇಳೆ, ಯೂಸುಫ್, ಇರ್ಫಾನ್‌ರ ಸಲಹೆಗಳು ನೆರವಾಗುತ್ತದೆ ಎಂದರು. ಆಟದಲ್ಲಿ ಹೆಚ್ಚು ಸಹನೆ-ತಾಳ್ಮೆ ಇರಬೇಕು. ಇಂದು ಅಂತಹ ಆಟ ಪ್ರದರ್ಶಿಸಿ. ತಂಡಕ್ಕೆ ನೆರವಾಗಿದ್ದು ಆತ್ಮವಿಶ್ವಾಸ ಹೆಚ್ಚಿದೆ ಎಂದ ದೀಪಕ್. ಕರ್ನಾಟಕದ ದಾಳಿ ಕೂಡ ಉತ್ತಮವಾಗಿತ್ತು ಎಂದು ಶ್ಲಾಘಿಸಿದರು.

SCROLL FOR NEXT