ಆಸ್ಟ್ರೇಲಿಯನ್ ಓಪನ್ ನಲ್ಲಿ ನಡಾಲ್ (ಸಂಗ್ರಹ ಚಿತ್ರ) 
ಕ್ರೀಡೆ

ನಡಾಲ್ ತಿಣುಕಾಟ

ವಿಶ್ವದ 3ನೇ ಶ್ರೇಯಾಂಕದ ಸ್ಪೇನ್‌ನ ರಾಫೆಲ್ ನಡಾಲ್ ಬುಧವಾರ ದ್ವಿತಿಯ ಸುತ್ತಿನ ಪಂದ್ಯದಲ್ಲಿ ಜಯಗಳಿಸಿ..

ಮೆಲ್ಬರ್ನ್: ವಿಶ್ವದ 3ನೇ ಶ್ರೇಯಾಂಕದ ಸ್ಪೇನ್‌ನ ರಾಫೆಲ್ ನಡಾಲ್ ಬುಧವಾರ ದ್ವಿತಿಯ ಸುತ್ತಿನ ಪಂದ್ಯದಲ್ಲಿ ಜಯಗಳಿಸಿ, 3ನೇ ಸುತ್ತಿಗೆ ಕಾಲಿಟ್ಟರು. ಆದರೆ ಅವರಿಗೆ ಆ ಜಯ ಸುವಭವಾಗಿರಲಿಲ್ಲ. ಅಮೆರಿಕದ ಆಟಗಾರ ಟಿಮ್ ಸ್ಮಿಜೆಕ್, ನಡಾಲ್‌ಗೆ ತೀವ್ರ ಪೈಪೋಟಿ ನೀಡಿದರು. ಆದರೂ ತೀವ್ರ ಹೋರಾಟ ನಡೆಸಿದ ನಡಾಲ್ 6-2, 3-6, 6-7, (2-7), 6-3, 7-5 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಅಂಡಿ ಮರ್ರೆಗೆ ಜಯ
ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್ ಆಂಡಿ ಮರ್ರೆ, ಆಸ್ಟ್ರೇಲಿಯಾದ ಮಾರಿಂಕೋ ಮ್ಯಾಟೋಸೆವಿಕ್ ವಿರುದ್ಧ 6-1, 6-3, 6-2 ಸೆಟ್‌ಗಳಲ್ಲಿ ಜಯ ಸಾಧಿಸಿದರು.

ಬ್ರಯಾನ್ ಸಹೋದರರಿಗೆ ಜಯ
ಅಮೆರಿಕದ ಬಾಬ್ ಬ್ರಾಯನ್ ಹಾಗೂ ಮೈಕ್ ಬ್ರಯಾನ್ ಜೋಡಿ, ಪುರುಷರ ಡಬಲ್ಸ್ ವಿಭಾಗದ ಮೂರನೇ ಸುತ್ತನ್ನು ಪ್ರವೇಶಿಸಿದೆ. ಬುಧವಾರದ ಪಂದ್ಯದಲ್ಲಿ ಈ ಜೋಡಿ, ಆಸ್ಟ್ರೇಲಿಯಾದ ಜಾನ್ ಮಿಲ್‌ಮನ್ ಹಾಗೂ ಬೆಂಜಮಿನ್ ಮಿಚೆಲ್ ಜೋಡಿಯನ್ನು 6-3, 7-5 ಸೆಟ್‌ಗಳಲ್ಲಿ ಪರಾಭವಗೊಳಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT