ಶನಿವಾರ ನಡೆದ ಕಿರಿಯರ ಸುತ್ತಿನ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಮೂವರು ಭಾರತೀಯರು ಗೆಲವು ಸಾಧಿಸಿ ಮುಖ್ಯ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ.
ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಾಂಜಲಾ ಯಡ್ಲಪಳ್ಳಿ ಅವರು ದಕ್ಷಿಣಾ ಆಫ್ರಿಕಾದ ಕ್ಯಾಟಿ ಪೊಲುಟಾ ಅವರನ್ನು 6-4, 6-3 ಸೆಟ್‍ಗಳಲ್ಲಿ ಸೋಲಿಸಿ, ಮುಖ್ಯ ಪಂದ್ಯಾವಳಿಗೆ ಕಾಲಿಟ್ಟರು.
ಇದೇ ವಿಭಾಗದ ಮತ್ತೊಂದು ಪಂದ್ಯದಲ್ಲಿ ಭಾರತದ ಒಜಸ್ವಿನಿ ಸಿಂಗ್, ಅಮೆರಿಕದ ಒಲಿವಿಯಾ ಹಾಗರ್ಅವರನ್ನು 6-0, 4-6, 1-6 ಅಂತರದಲ್ಲಿ ಸೋಲಿಸಿ ಮುನ್ನಡೆ ಪಡೆದರು. ಇನ್ನು, ಬಾಲಕರ ವಿಭಾಗದಲ್ಲಿ, ಸಮಿತ್ ನಾಗಲ್ ಅವರು, ಅಮೆರಿಕದ ಮೈಕಲ್ ಮೊ ಅವರನ್ನು 6-2, 4-6, 6-2 ಸೆಟ್‍ಗಳಲ್ಲಿ ಸೋಲಿಸಿದರು.