ಜಸ್ವಂತ್ ಸಿಂಗ್ ರಜಪೂತ್ 
ಕ್ರೀಡೆ

ಒಲಿಂಪಿಕ್ ಸ್ವರ್ಣ ಪದಕ ವಿಜೇತ ಹಾಕಿ ಪಟು ಜಸ್ವಂತ್ ನಿಧನ

ಒಲಿಂಪಿಕ್ಸ್ ಹಾಕಿಯಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿದ್ದ ಜಸ್ವಂತ್ ಸಿಂಗ್ ರಜಪೂತ್(88) ನಿಧನರಾಗಿದ್ದಾರೆ...

ಕೋಲ್ಕತಾ: ಒಲಿಂಪಿಕ್ಸ್ ಹಾಕಿಯಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿದ್ದ ಜಸ್ವಂತ್ ಸಿಂಗ್ ರಜಪೂತ್(88) ನಿಧನರಾಗಿದ್ದಾರೆ.

ಕಳೆದೊಂದು ತಿಂಗಳಿನಿಂದ ವಯೋಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಪಾರ್ಕ್ ಸ್ಟ್ರೀಟ್‌ನ ಬಳಿಯಿರುವ ಅವರ ಸಂಬಧಿಕರ ಮನೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಬೆಳಗ್ಗೆ ನಿಧನರಾದರೆಂದು ಬಂಗಾಳ ಹಾಕಿ ಸಂಸ್ಥೆ ತಿಳಿಸಿದೆ.

ಮೃತರ ಅಂತ್ಯಕ್ರಿಯೆಯನ್ನು ಗುರುವಾರ ನೆರವೇರಿಸಲಾಗುವುದು. ಜಸ್ವಂತ್ ಸಿಂಗ್ ರಜಪೂತ್ ನಿಧನಕ್ಕೆ ಒಲಿಂಪಿಕ್ಸ್‌ನ ಮಾಜಿ ಕ್ರೀಡಾಳು ಗುರುಬಕ್ಷ್ ಸಿಂಗ್ ಶೋಕ ವ್ಯಕ್ತಪಡಿಸಿದ್ದಾರೆ. ಜಾಗತಿಕ ಕೀಡಾಲೋಕದಲ್ಲಿ ಭಾರತಕ್ಕೆ ಗೌರವ, ಪ್ರತಿಷ್ಠೆಗಳನ್ನು ತಂದ ನಕ್ಷತ್ರಪುಂಜದಲ್ಲಿ ಜಸ್ವಂತ್ ಸಿಂಗ್ ಕೂಡಾ ಒಬ್ಬರು ಎಂದು ಬಣ್ಣಿಸಿರುವ ಅವರು, ಜಸ್ವಂತ್ ಅವರ ಸಾಧನೆ ಎಂದಿಗೂ ಚಿರಸ್ಮರಣೀಯ ಎಂದಿದ್ದಾರೆ.

1948ರಲ್ಲಿ ಲಂಡನ್‌ನಲ್ಲಿ ಹಾಗೂ 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದಿದ್ದ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಭಾರತ ತಂಡದಲ್ಲಿ ಸಂಪರ್ಕ ಆಟಗಾರರಾಗಿ ಜಸ್ವಂತ್ ಸಿಂಗ್ ಆಡಿದ್ದರು. ಅಂದಿನ ಭಾರತ ತಂಡದ ಪ್ರಮುಖ ಆಟಗಾರರಲ್ಲಿ ಇವರೂ ಒಬ್ಬರಾಗಿದ್ದರು. 1952ರಲ್ಲಿ ಮೋಹನ್ ಬಗಾನ್ ತಂಡದಲ್ಲೂ ಆಡಿದ್ದ ಅವರು, ಆ ತಂಡ ಬಿಗ್ಟನ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT