ದುಬೈ: ಫೆಬ್ರವರಿ 14ರಂದು ಆರಂಭವಾಗಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ -2015 ಪಂದ್ಯಾಟದ ಅಂಪೈರ್ ಮತ್ತು ರೆಫ್ರಿಗಳ ಹೆಸರನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ.
ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಮಾರೈಸ್ ಇರಾಸ್ಮಸ್ ಮತ್ತು ನಿಗೇಲ್ ಲೋಂಗ್ ಅವರು ಆನ್ಫೀಲ್ಡ್ ಅಂಪೈರ್ಗಳಾಗಿದ್ದಾರೆ. ಎಸ್.ರವಿ ಮತ್ತು ಸಿಮೋನ್ ಫ್ರೈ ಮೂರನೇ ಮತ್ತು ನಾಲ್ಕನೇ ಅಂಪೈರ್ಗಳಾಗಿದ್ದು, ಕ್ರಿಸ್ಟ್ಚರ್ಚ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಡೇವಿಡ್ ಬೂನ್ ಮ್ಯಾಚ್ ರೆಫ್ರಿ ಆಗಲಿದ್ದಾರೆ.
ಅದೇ ದಿನ ಮೆಲ್ಬರ್ನ್ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಹಣಾಹಣಿ ನಡೆಯಲಿದ್ದು, ಪ್ರಸ್ತುತ ಪಂದ್ಯದಲ್ಲಿ ಅಲೀಂ ದಾರ್ ಮತ್ತು ಕುಮಾರ್ ಧರ್ಮಸೇನಾ ಅಂಪೈರ್ಗಳಾಗಿದ್ದಾರೆ. ಬಿಲ್ಲಿ ಬೋವ್ಡೆನ್ ಮೂರನೇ ಅಂಪೈರ್ ಹಾಗೂ ಜೋಯೆಲ್ ವಿಲ್ಸನ್ ನಾಲ್ಕನೇ ಅಂಪೈರ್ ಆಗಲಿದ್ದಾರೆ. ಜೆಫ್ ಕ್ರೋವ್ ಮ್ಯಾಚ್ ರೆಫ್ರಿಯಾಗಿದ್ದಾರೆ.
ಬೂನ್ ಮತ್ತು ಕ್ರೋವ್ ಜತೆಗೆ ಕ್ರಿಸ್ ಬ್ರೋಡ್, ರಂಜನ್ ಮದುಗಲೆ ಮತ್ತು ರೋಷನ್ ಮಹಾನಾಮ ಅವರು ಈ ಪಂದ್ಯಾಟದಲ್ಲಿ ರೆಫ್ರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರೆಲ್ಲರೂ ಎಮೆರೈಟ್ಸ್ ಎಲೈಟ್ ಪ್ಯಾನೆಲ್ ಆಫ್ ಐಸಿಸಿ ಮ್ಯಾಚ್ ರೆಫ್ರಿಗಳ ಸದಸ್ಯರಾಗಿದ್ದಾರೆ.
ನಾಲ್ವರು ಆನ್ ಫೀಲ್ಡ್ ಅಂಪೈರ್ಗಳನ್ನು ಹೊರತುಪಡಿಸಿ ಬ್ರೂಸ್ ಆಕ್ಸೆನ್ಫಾರ್ಡ್, ಇಯಾನ್ ಗೌಲ್ಡ್, ಪೈಲ್ ರೈಫಲ್, ರಿಚಾರ್ಡ್ ಇಲ್ಲಿಂಗ್ವರ್ತ್, ರಿಚಾರ್ಡ್ ಕೆಟೆಲ್ಬೋರೋಗ್, ರೋಡ್ ಟ್ಯೂಕೆರ್ ಮತ್ತು ಸ್ಟೇವ್ ಡೇವಿಸ್ ಅಂಪೈರ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಫ್ರೈ, ರವಿ ಮತ್ತು ವಿಲ್ಸನ್ ಎಮೆರೈಟ್ಸ್ ಎಲೈಟ್ ಪ್ಯಾನೆಲ್ ಆಫ್ ಐಸಿಸಿ ಅಂಪೈರ್ ಸದಸ್ಯರಾಗಿದ್ದಾರೆ. ಇವರ ಜತೆ ಜೊಹಾನ್ ಕ್ಲೋಟೆ, ಕ್ರಿಸ್ ಗಾಫೆನೆ, ವಿಶೆಲ್ ಗೋವ್, ರಾನ್ಮೋರ್ ಮಾರ್ಟಿನೆಜ್ ಮತ್ತು ರುಚಿರಾ ಪಲ್ಲಿಯಾಗುರು ಇವರೊಂದಿಗೆ ಜವಾಬ್ದಾರಿ ಹಂಚಿಕೊಳ್ಳಲಿದ್ದಾರೆ.