ಕ್ರೀಡೆ

ವಿರಾಟ್ ನನಗೆ ಸ್ಪೂರ್ತಿ: ರಾಹುಲ್

Rashmi Kasaragodu

ಬೆಂಗಳೂರು: ಉತ್ತರಪ್ರದೇಶ ವಿರುದ್ಧ  ನಡೆಯುತ್ತಿರುವ ರಣಜಿ ಟ್ರೋಫಿ  ಪಂದ್ಯದಲ್ಲಿ ತ್ರಿಶತಕ ದಾಖಲಿಸುವ ಮೂಲಕ, ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೆ.ಎಲ್ . ರಾಹುಲ್ , ನನ್ನ ಈ ಸಾಧನೆಗೆ ವಿರಾಟ್ ಕೊಹ್ಲಿಯೇ  ಸ್ಪೂರ್ತಿ ಎಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಎರಡನೇ ದಿನದಾಟದಲ್ಲಿ ದಾಖಲೆಯ 337 ರನ್ ಸಿಡಿಸಿದ್ದ ರಾಹುಲ್  ಈ ಸಾಧನೆ ಮಾಡಲು ಸಾಧ್ಯವಾಗಿದ್ದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಿಡಿಸಿದ ಟೆಸ್ಟ್ ಶತಕದ ಸ್ಪೂರ್ತಿಯಂತೆ. ಇತ್ತೀಚೆಗೆ ಆಸ್ಟ್ರೇಲಿಯಾ ದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಅವರು, ಸಿಡ್ನಿಯಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ 110 ರನ್ ಸಿಡಿಸಿದ್ದರು. ಸರಣಿ ಮುಗಿದ ಮೇಲೆ ತವರಿಗೆ ಮರಳಿರುವ ಅವರು ರಣಜಿಯಲ್ಲಿ ಈಗ ತ್ರಿಶತಕದ ಸಾಧನೆ ಮಾಡಿದ್ದಾರೆ. ಈ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿರುವ ಅವರು, ಸಿಡ್ನಿಯಲ್ಲಿನ ಯಶಸ್ಸು ತಮಗೆ ಈಗ ತ್ರಿಶತಕ ಸಿಡಿಸಲು ಆತ್ಮವಿಶ್ವಾಸ ತುಂಬಿತ್ತು ಎಂದರು. ತಮ್ಮ ಈ ಸಾಧನೆಗೆ ಟೀಂ ಇಂಡಿಯಾದ ಉಪನಾಯಕ ವಿರಾಟ್ ಕೊಹ್ಲಿಯೇ  ಸ್ಪೂರ್ತಿ ಎನ್ನುವ ರಾಹುಲ್ ಎಬಿ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ವೈಖರಿಯೂ ತಮ್ಮ ಮೇಲೆ ಅಗಾಧವಾದ ಪರಿಣಾಮ ಬೀರಿದೆ ಎನ್ನುತ್ತಾರೆ.

SCROLL FOR NEXT