ದೇಶೀ ಅಂಪೈರ್(ಸಾಂದರ್ಭಿಕ ಚಿತ್ರ) 
ಕ್ರೀಡೆ

ಇಂಗ್ಲೀಷ್ ಶಿಕ್ಷಣ ಪಡೆಯುವಂತೆ ದೇಶೀ ಅಂಪೈರ್ ಗಳಿಗೆ ಬಿಸಿಸಿಐ ಸಲಹೆ

ಅಂಪೈರ್ ಗಳ ಸಂವಹನ ಕೌಶಲವನ್ನು ಉತ್ತಮಗೊಳಿಸಲು ಅಂಪೈರ್ ಅಭಿವೃದ್ಧಿ ಕಾರ್ಯಕ್ರಮದಡಿ ಬಿಸಿಸಿಐ ಅಭೂತಪೂರ್ವ ಪ್ರಯತ್ನ ನಡೆಸಿದೆ.

ನವದೆಹಲಿ: ಅಂಪೈರ್ ಗಳ ಸಂವಹನ ಕೌಶಲ್ಯವನ್ನು ಉತ್ತಮಗೊಳಿಸಲು ಅಂಪೈರ್ ಅಭಿವೃದ್ಧಿ ಕಾರ್ಯಕ್ರಮದಡಿ ಬಿಸಿಸಿಐ ಅಭೂತಪೂರ್ವ ಪ್ರಯತ್ನ ನಡೆಸಿದೆ. ಇದಕ್ಕಾಗಿ ಪ್ರತ್ಯೇಕ ಇಂಗ್ಲೀಷ್ ತರಗತಿಗಳನ್ನು ಆಯೋಜಿಸಲಾಗಿದೆ.

ಜುಲೈ.23 ರಿಂದ ಬ್ರಿಟೀಷ್ ಕೌನ್ಸಿಲ್ ನ ತರಬೇತುದಾರರು 20 ಅಂಪೈರ್ ಗಳ ಮೊದಲ ಬ್ಯಾಚ್ ಗೆ ಇಂಗ್ಲೀಷ್ ಹೇಳಿಕೊಡಲಿದ್ದಾರೆ. ಈ ಕೋರ್ಸ್ ನ ಅವಧಿ 10 ದಿನಗಳಾಗಿದ್ದು ಆಗಸ್ಟ್ 1 ಕ್ಕೆ ಮುಕ್ತಾಯಗೊಳ್ಳಲಿದೆ. ಬ್ರಿಟೀಷ್ ಕೌನ್ಸಿಲ್ ಸಹಯೋಗದಲ್ಲಿ ಐಸಿಸಿಯಿಂದ ಈ ಕೋರ್ಸ್ ನ್ನು ರೂಪುಗೊಳಿಸಲಾಗಿದ್ದು ಮುಂಬೈ ನಲ್ಲಿರುವ ಬಿಸಿಸಿಐ ನ ಕೇಂದ್ರ ಕಚೇರಿಯಲ್ಲಿ ತರಗತಿಗಳು ನಡೆದಿದೆ.

ಐಸಿಸಿಯ ಎಲೈಟ್ ಪ್ಯಾನಲ್ ನಲ್ಲಿ ತಮಿಳುನಾಡಿನ ಎಸ್.ರವಿ ಏಕೈಕ ಪ್ರತಿನಿಧಿಯಾದ್ದು, ಇದಕ್ಕೂ ಮೊದಲು ಭಾರತದ ಯಾವುದೇ ಅಂಪೈರ್ ಗಳು ಐಸಿಸಿಯ ಗಣ್ಯರ ಪ್ಯಾನಲ್ ನಲ್ಲಿ ಸ್ಥಾನ ಪಡೆದಿರಲಿಲ್ಲ. ಈ ಗೌರವಕ್ಕೆ ಪಾತ್ರರಾಗಬೇಕಾದರೆ ಅಂತಾರಾಷ್ಟ್ರೀಯ ಕ್ರಿಕೆಟರ್ ಗಳೊಂಗಿಗೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಬೇಕಾಗುತ್ತದೆ. ಭಾರತದ ಅಂಪೈರ್ ಗಳ ಇಂಗ್ಲೀಷ್ ಸಂವಹನ ಕೌಶಲ್ಯವನ್ನು ಉತ್ತಮಗೊಳಿಸಲು ಬಿಸಿಸಿಐ ಕ್ರಮ ಕೈಗೊಂಡಿದ್ದು ಇಂಗ್ಲೀಷ್ ಸಂವಹನವನ್ನು ಉತ್ತಮಗೊಳಿಸುವ ತರಗತಿಗಳನ್ನು ಪ್ರಾರಂಭಿಸಿದೆ.

ಅಂಪೈರ್ ಗಳ ಸಮಗ್ರ ಅಭಿವೃದ್ಧಿಯಲ್ಲಿ ಇಂಗ್ಲೀಷ್ ಸಂವಹನವು ಒಂದಾಗಿದೆ. ಆಟಗಾರರು ಹಾಗೂ ಅಂಪೈರ್ ಗಳ ನಡುವೆ ಉತ್ತಮ ಹೊಂದಾಣಿಕೆ ಉಂತಾಗಲು ಕಾರಣವಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT