ಕ್ರೀಡೆ

ಐಪಿಎಸ್ ಅಧಿಕಾರಿ ರೆಡ್ಡಿಗೆ ಸ್ವರ್ಣ ಗರಿ

Vishwanath S

ಬೆಂಗಳೂರು: ಅಮೆರಿಕದ ವರ್ಜೀನಿಯಾದಲ್ಲಿ ಇತ್ತೀಚೆಗೆ ನಡೆದ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಕರ್ನಾಟಕ ಐಪಿಎಸ್ ಅಧಿಕಾರಿ ಬಿಎನ್ಎಸ್ ರೆಡ್ಡಿ ಅವರು ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಟೆನಿಸ್ ಸಿಂಗಲ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು, ಫೈನಲ್ ಪಂದ್ಯದಲ್ಲಿ ಅಮೆರಿಕದ ಬ್ರೂಸ್ಬ್ಯಾ ರಿಹೋಸ್ ಅವರನ್ನು 75, 76 ಸೆಟ್‍ಗಳಿಂದ ಸೋಲಿಸಿ, ಬಂಗಾರದ ಪದಕಕ್ಕೆ ಭಾಜನರಾದರು.

ಮೊದಲ ಅಧಿಕಾರಿ: ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಸಾಧನೆಗೈದ ರಾಜ್ಯದ ಹಾಗೂ ದಕ್ಷಿಣ ಭಾರತದ ಮೊಟ್ಟ ಮೊದಲ ಪೊಲೀಸ್ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ರೆಡ್ಡಿ ಪಾತ್ರರಾಗಿದ್ದಾರೆ. ಅಲ್ಲದೆ, ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರ ಎಂಬ ಹಿರಿಮೆಯೂ ಅವರದ್ದಾಗಿದೆ. ಈ ಹಿಂದೆ ಆಶಿಶ್ ಕಪೂರ್ ಎಂಬ ಪೊಲೀಸ್ ಅಧಿಕಾರಿಯೊಬ್ಬರು, ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ಇದನ್ನು ಬಿಟ್ಟರೆ ಈವರೆಗೆ ಇಂಥದ್ದೊಂದು ಸಾಧನೆಯಾಗಿರಲಿಲ್ಲ.

ಪಂದ್ಯವಳಿಯ ವಿಶೇಷ: ಪೊಲೀಸ್ ಇಲಾಖೆಯಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿ 2 ವರ್ಷಗಳಿಗೊಮ್ಮೆ ಪೊಲೀಸ್ ಕ್ರೀಡಾಕೂಟ ಏರ್ಪಡಿಸಲಾಗುತ್ತದೆ. ಈಬಾರಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ 70 ದೇಶಗಳಿಂದ ಸುಮಾರು 12 ಸಾವಿರ ಅಥ್ಲೀಟ್‍ಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಮುಂದಿನ ಪಂದ್ಯಾವಳಿಯು 2017ರಲ್ಲಿ ಕೆನಡಾದಲ್ಲಿ ನಡೆಯುತ್ತದೆ.

SCROLL FOR NEXT