ನವದೆಹಲಿ: ಇದೇ ತಿಂಗಳ 14ರಿಂದ 17ರವರೆಗೆ ಮೈಸೂರಿನಲ್ಲಿ ನಡೆಯಲಿರುವ ಮಹಿಳೆಯರ ಚಾಲೆಂಜರ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಇಂಡಿಯಾ ರೆಡ್, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್ (19 ವರ್ಷದೊಳಗಿನ) ತಂಡಗಳನ್ನು ಸೋಮವಾರ ಪ್ರಕಟಿಸಲಾಗಿದೆ.
ತಂಡವನ್ನು ಪ್ರಕಟಿಸಿದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್, ಇದೇ ವರ್ಷ ಜೂನ್-ಜುಲೈನಲ್ಲಿ ನಡೆಯಲಿರುವ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಚಾಲೆಂಜರ್ ಟ್ರೋಫಿ ಉತ್ತಮ ಅಡಿಪಾಯ ಹಾಕಲಿದೆ ಎಂದಿದ್ದಾರೆಂದು `ದ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್' ವರದಿ ಮಾಡಿದೆ.
ಪ್ರಕಟಗೊಂಡ ತಂಡಗಳು ಇಂತಿವೆ..
ಇಂಡಿಯಾ ರೆಡ್
ಸ್ಮೃತಿ ಮಂದನಾ (ನಾಯಕಿ), ಶಿಖಾ ಪಾಂಡೆ, ಪೂನಮ್ ರವೂತ್, ಲತಿಕಾ ಕುಮಾರಿ, ಸ್ನೇಹಾ ಮೋರೆ, ಮಧುಸ್ಮಿತಾ ಬೆಹೆರಾ, ಕಲ್ಪನಾ ಆರ್., ಸ್ನೇಹ್ ರಾಣಾ, ಮೇಘನಾ ಎಸ್., ಸ್ನೇಹಲ್ ಪ್ರಧಾನ್, ಎಸ್. ಶುಭಲಕ್ಷ್ಮಿ, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್.
ಇಂಡಿಯಾ ಬ್ಲೂ
ಹರ್ಮನ್ ಪ್ರೀತ್ ಕೌರ್ (ನಾಯಕಿ), ತಿರುಷ್ಕಾಮಿನಿ, ಪರಮಿತಾ ರಾಯï, ವೇದಾ ಕೃಷ್ಣಮೂರ್ತಿ, ಸಾರಿಕಾ ಕೊಹ್ಲಿ, ರಕ್ಷಿತಾ ಕೆ. ಕಾಳೇಗೌಡ, ಸುಷ್ಮಾ ವರ್ಮಾ, ಅನುಜಾ ಪಾಟೀಲ್, ನಿರಂಜನ ನಾಗರಾಜನ್, ಅನನ್ಯಾ ಉಪೇಂದ್ರನ್, ಕವಿತಾ ಪಾಟಿಲ್, ಏಕ್ತಾ ಬಿಶ್ತ್, ಪ್ರೀತಿ ಬೋಸ್.
ಇಂಡಿಯಾ ಗ್ರೀನ್ (19 ವರ್ಷದೊಳಗಿನ)
ದೇವಿಕಾ ವೈದ್ಯ (ನಾಯಕಿ), ದೀಪ್ತಿ ಶರ್ಮಾ, ಪ್ರಿಯಾ ಪೂನಿಯಾ, ದಿವ್ಯಾ ಜ್ಞಾನಾನಂದ್, ರಮ್ಯ ಡೋಲಿ, ಪುಷ್ಪಾ ಕಿರೇಸುರ್, ಜರ್ಮಯ್ಯ ರೊಡ್ರಿಗ್ಯುಸ್, ಏಕ್ತಾ ಸಿಂಗ್, ತೇಜಲ್ ಹಸಬ್ನಿಸ್, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್, ಸುಶ್ರೀ ಪ್ರಧಾನ್, ತಾನಿಯಾಭಾಟಿಯಾ.