ಸಾಂದರ್ಭಿಕ ಚಿತ್ರ 
ಕ್ರೀಡೆ

ಮಾಳವಿಕಾ ದಾಖಲೆ

ಕರ್ನಾಟಕದ ಭರವಸೆಯ ಈಜುಗಾರ್ತಿ ಮಾಳವಿಕಾ.ವಿ ಮಿಂಚಿನ ಪ್ರದರ್ಶನ ನೀಡುವ ಮೂಲಕ ರಾಜ್ಯ ಸಬ್ ಜ್ಯೂನಿಯರ್.....

ಬೆಂಗಳೂರು: ಕರ್ನಾಟಕದ ಭರವಸೆಯ ಈಜುಗಾರ್ತಿ ಮಾಳವಿಕಾ.ವಿ ಮಿಂಚಿನ ಪ್ರದರ್ಶನ ನೀಡುವ ಮೂಲಕ ರಾಜ್ಯ ಸಬ್ ಜ್ಯೂನಿಯರ್ ಮತ್ತು ಜೂನಿಯರ್ ಈಜು ಚಾಂಪಿನ್ ಶಿಪ್ ನಲ್ಲಿ ರಾಜ್ಯ ದಾಖಲೆ ಬರೆದಿದ್ದಾರೆ.

ಬಸವನಗುಡಿ ಈಜು ಕೇಂದ್ರದಲ್ಲಿ ಮಂಗಳವಾರ ನಡೆದ ಮಹಿಳೆಯರ 800ಮೀ,  ಫ್ರೀಸ್ಟೈಲ್ ವಿಭಾಗದಲ್ಲಿ ಮಾಳವಿಕಾ 9.27.60 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ 2012 ರಲ್ಲಿ ಕೃಷ್ಣ ಕೊಲ್ಲಾಳಿ ಅವರ 9.44.25 ದಾಖಲೆ ಮುರಿದಿದ್ದಾರೆ.

ಮಹಿಳೆಯರ 50 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕೆ.ಹರಿಶ್ರೀ ರೈ 32.46 ಸೆಕಂಡ್ ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ 2001 ರಲ್ಲಿ ರೇಷ್ಮಾ ಮಿಲ್ಲೆಟ್ ನಿರ್ಮಿಸಿದ್ದ ರಾಜ್ಯ ಮಟ್ಟದ ದಾಖಲೆ ಅಳಿಸಿ ಹಾಕಿದ್ದಾರೆ.

ಬಾಲಕರ 200 ಮೀಟರ್ ಮಿಡ್ಲ್ ವಿಭಾಗದಲ್ಲಿ ಶೋಹನ್ ಗಂಗೂಲಿ 2.44.19 ನಿಮಿಷದಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಭರತ್ ಕುಮಾರ್ ವಿ 2000 ದಲ್ಲಿ ನಿರ್ಮಿಸಿದ್ದ ದಾಖಲೆ ಹಿಂದಿಕ್ಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT