ಭಾರತ ಕ್ರಿಕೆಟ್ ತಂಡ 
ಕ್ರೀಡೆ

ಏಕದಿನ ಸರಣಿಗೆ ಟೀಂ ಇಂಡಿಯಾ ಸಜ್ಜು

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರು ಸಿದ್ದತೆ ನಡೆಸಿದ್ದಾರೆ...

ಡಾಕಾ: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರು ಸಿದ್ದತೆ ನಡೆಸಿದ್ದಾರೆ, ಭಾರತ ಏಕದಿನ ತಂಡದಲ್ಲಿನ ಎಂಟು ಆಟಗಾರರು ಸುದೀರ್ಘ ವಿರಾಮದ ನಂತರ ಈಗ ಏಕದಿನ ಸರಣಿಗೆ ಸಜ್ಜಾಗಿದ್ದಾರೆ, ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜತೆಗೆ ಸ್ಟುವರ್ಟ್ ಬಿನ್ನಿ, ರವೀಂದ್ರ ಜಡೇಜಾ, ಅಕ್ಷರಾ ಪಟೇಲ್, ಸುರೇಶ್ ರೈನಾ, ಮೋಹಿತ್ ಶರ್ಮಾ, ಧವಳ್ ಕುಲಕರ್ಣಿ  ಮತ್ತು ಅಂಬಟಿ ರಾಯುಡು, ಸೋಮವಾರ ಬಾಂಗ್ಲಾಗೆ ಆಗಮಿಸಿದರು. ಮಂಗಳವಾರ ಮೀರ್ ಪುರದ ಶೇರ್  ಎ ಬಾಂಗ್ಲಾ  ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದರು,

ಮಳೆಯಿಂದ ಅಡಚಣೆಗೊಳಗಾದ ಟೆಸ್ಟ್ ಪಂದ್ಯದಲ್ಲಿ ಅತಿಥೇಯರ ವಿರುದ್ಧ ಪ್ರಾಬಲ್ಯ ಮೆರೆದಿದ್ದ ಭಾರತ ತಂಡ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಕೆಲ ಆಟಗಾರರು ಏಕದಿನ ತಂಡದಲ್ಲಿ ಮುಂದುವರಿಯಲಿದ್ದು, ಉಳಿದ ಆಟಗಾರರು ತವರಿಗೆ ಮರಳಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ತಂಡದ ತಂಡದ ಮ್ಯಾನೇಜರ್ ವಿಶ್ವರೂಪ್ ಡೇ, ತವರಿಗೆ ಮರಳಿದ ಆಟಗಾರರಿಗೆ ಬೀಳ್ಕೊಡುಗೆ ನೀಡಲು ನಿರ್ಧರಿಸಲಾಗಿತ್ತು ಎಂದರು,
ಜೂನ್ 18 ರಂದು ಮೊದಲ ಏಕದಿನ ಪಂದ್ಯ ಆರಂಭವಾಗಲಿದ್ದು, ನಂತರ 21 ಹಾಗೂ 24 ರಂದು ಕ್ರಮವಾಗಿ 2ನೇ ಹಾಗೂ ಮೂರನೇ ಪಂದ್ಯಗಳು ನಡೆಯಲಿವೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು