ಟೀಂ ಇಂಡಿಯಾ 
ಕ್ರೀಡೆ

ವನಿತೆಯರಿಗೆ ಕಠಿಣ ಪರೀಕ್ಷೆ

ಹಾಕಿ ವಿಶ್ವ ಲೀಗ್ ಸೆಮಿಫೈನಲ್‍ನ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆಯುವ ಮುನ್ನ ಭಾರತ ವನಿತಾ ಹಾಕಿ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ.

ಆ್ಯಂಟ್‍ವರ್ಪ್: ಹಾಕಿ ವಿಶ್ವ ಲೀಗ್ ಸೆಮಿಫೈನಲ್‍ನ ಕ್ವಾರ್ಟರ್ ಫೈನಲ್‍ಗೆ ಪ್ರವೇಶ ಪಡೆಯುವ ಮುನ್ನ ಭಾರತ ವನಿತಾ ಹಾಕಿ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ.

ಶನಿವಾರ ನಡೆಯಲಿರುವ ಮಹತ್ವನೀಯ ಪಂದ್ಯದಲ್ಲಿ ರಿತು ರಾಣಿ ಸಾರಥ್ಯದ ಭಾರತ ಮಹಿಳಾ ಹಾಕಿ ತಂಡ ಬಲಿಷ್ಟ ಆಸ್ಟ್ರೇಲಿಯಾ ವನಿತೆಯರಿಂದ ಸತ್ವಪರೀಕ್ಷೆ ಎದುರಿಸಬೇಕಾಗಿದೆ. `ಬಿ' ಗುಂಪಿನಲ್ಲಿರುವ ಭಾರತ ತಂಡ ಆರಂಭಿಕ ಸುತ್ತಿನ ಎರಡೂ ಪಂದ್ಯಗಳಲ್ಲಿ ದಯನೀಯ ಸೋಲುಂಡಿತ್ತು. ಬೆಲ್ಜಿಯಂ ವಿರುದ್ಧ 0-1 ಹಾಗೂ ನ್ಯೂಜಿಲೆಂಡ್ ವಿರುದ್ಧ 0-5 ಗೋಲುಗಳ ಹೀನಾಯ ಸೋಲಿನಿಂದ ಕಂಗೆಟ್ಟಿತ್ತು. ಆದರೆ ಮೂರನೇ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ರಿತು ರಾಣಿ ಪಡೆ 3-1 ಗೋಲುಗಳಿಂದ ಪೋಲೆಂಡ್ ವಿರುದ್ಧ ಜಯ ಪಡೆದು ಟೂರ್ನಿಯಲ್ಲಿ ಪುಟಿದೆದ್ದು ನಿಂತಿತು.

ಪೊಲೆಂಡ್ ವಿರುದ್ಧದ ಗೆಲುವಿನಲ್ಲಿ ನಾಯಕಿ ರಾಣಿ ತೋರಿದ ಪ್ರಚಂಡ ಆಟ ಸಹ ಆಟಗಾರ್ತಿಯರಿಗೆ ಸ್ಫೂರ್ತಿಯಂತಿತ್ತು. ಚೆಂಡನ್ನು ಪಾಸ್ ಮಾಡುವಲ್ಲಿ ಅತ್ಯಂತ ಚಲನಶೀಲ ಪ್ರದರ್ಶನ ನೀಡಿದ್ದ ಅವರು ಟೂರ್ನಿಯಲ್ಲಿನ ಭಾರತದ ಮೊದಲ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ``ಆಸ್ಟ್ರೇಲಿಯಾ ತಂಡ ಬಲಿಷ್ಟವಾಗಿದ್ದು, ಅದರ ವಿರುದ್ಧದ ಪಂದ್ಯ ನಮಗೆ ನಿರ್ಣಾಯಕವಾಗಿದೆ.

ಇಷ್ಟಾದರೂ ನ್ಯೂಜಿಲೆಂಡ್‍ನಲ್ಲಿ ಇತ್ತೀಚೆಗೆ ನಡೆದ ಹಾಕಿ ಬೇ ಕಪ್ 2015ರ ಟೂರ್ನಿಯಲ್ಲಿ ಅದು ಗೋಲು ಗಳಿಸದಂತೆ ದಿಟ್ಟ ಪೈಪೋಟಿ ನೀಡಿದ್ದೆವು. ಆದಾಗ್ಯೂ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ನಲ್ಲಿ 2-4 ಗೋಲುಗಳಿಂದ ಸೋಲನುಭವಿಸಿದ್ದು ನಮ್ಮ ನೆನಪಿನಲ್ಲಿದೆ. ಹೀಗಾಗಿ ಈ ಬಾರಿ ಆ ಸೋಲಿಗೆ ಪ್ರತಿಯಾಗಿ ಜಯ ಸಾ„ಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ'' ಎಂದು ಪಂದ್ಯದ ಮುನ್ನಾ ದಿನದಂದು ನಡೆದ ಸುದ್ದಿಗೋಷ್ಠಿಯಲ್ಲಿ ರಿತು ರಾಣಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ