ರವೀಂದ್ರ ಜಡೇಜ, ಸುರೇಶ್ ರೈನಾ 
ಕ್ರೀಡೆ

ಲಂಚಾರೋಪ: ಮೂವರು ಕ್ರಿಕೆಟಿಗರ ವಿರುದ್ಧ ಬಾಂಬ್ ಸಿಡಿದ ಲಲಿತ್ ಮೋದಿ

ಐಪಿಎಲ್‌‌‌ನ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ವೀಸಾ ನೆರವು ಕುರಿತಂತೆ ಬಿಜೆಪಿಯಲ್ಲಿ ತಲ್ಲಣವನ್ನೇ ಸೃಷ್ಠಿಸಿತ್ತು. ಇದೀಗ ಲಲಿತ್ ಮೋದಿ ಮತ್ತೆ ಹೊಸ ಬಾಂಬ್...

ನವದೆಹಲಿ: ಐಪಿಎಲ್‌‌‌ನ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ವೀಸಾ ನೆರವು ಕುರಿತಂತೆ ಬಿಜೆಪಿಯಲ್ಲಿ ತಲ್ಲಣವನ್ನೇ ಸೃಷ್ಠಿಸಿತ್ತು. ಇದೀಗ ಲಲಿತ್ ಮೋದಿ ಮತ್ತೆ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದು, ಮೂವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರ ಮೇಲೆ ಲಂಚ ಪಡೆದ ಆರೋಪ ಮಾಡಿದ್ದಾರೆ.

ಲಲಿತ್  ಮೋದಿ ಆರೋಪಿಸಿರುವರಲ್ಲಿ ಇಬ್ಬರು ಭಾರತ ಕ್ರಿಕೆಟ್‌ ತಂಡದ ಮುಂಚೂಣಿ ಆಟಗಾರರಾದ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜ. ಮತ್ತೊರ್ವ ವೆಸ್ಟ್‌ ಇಂಡೀಸ್‌ ಆಟಗಾರ ಡ್ವೈನ್ ಬ್ರಾವೋ. ಈ ಮೂವರೂ ಕೂಡ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಕೇಳಿಬಂದಿದೆ.

ಈ ಮೂವರು ಆಟಗಾರರೂ ಕೂಡ ರಿಯಲ್‌ ಎಸ್ಟೇಟ್‌ ಉದ್ಯಮಿಯೋರ್ವರಿಂದ ಲಂಚ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಅಗತ್ಯ ಮಾಹಿತಿಗಳನ್ನು ಅಂದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಸಿಇಓ ಡೇವ್‌ ರಿಚರ್ಡಸನ್‌ ಅವರಿಗೆ 2013ರ ಜೂನ್‌ನಲ್ಲಿಯೇ ನೀಡಿರುವುದಾಗಿ ಲಲಿತ್ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕೊನೆಯಲ್ಲಿ ಲಂಚ ಪಡೆದಿರುವ ಮೂವರು ಆಟಗಾರರು ರಿಯಲ್‌ ಎಸ್ಟೇಟ್‌ ಉದ್ಯಮಿಗೆ ಬಹಳ ಆಪ್ತರಾಗಿದ್ದಾರೆ. ಆದರೆ ಇವರು ಲಂಚ ಪಡೆದ ಬಗ್ಗೆ ಕೇವಲ ಬಲ್ಲ ಮೂಲಗಳಿಂದ ತಿಳಿದಿದೆ. ಇದು ಸತ್ಯವಲ್ಲ ಎಂಬುದು ನನ್ನ ಭಾವನೆ. ಒಂದು ವೇಳೆ ಈ ಆರೋಪ ಸತ್ಯವಾಗಿದ್ದಲ್ಲಿ ಇದರಲ್ಲಿ ಇನ್ನೂ ಹಲವು ಮಂದಿ ಆಟಗಾರರು ಭಾಗಿಯಾಗಿರಬಹುದು ಎಂದೂ ಕೂಡ ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

SCROLL FOR NEXT