ನವದೆಹಲಿ: ಮುಂಬವರು ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ತಂಡದಲ್ಲಿ ಕಿರಿಯರಿಗೆ ಸ್ಥಾನ ನೀಡಲಾಗಿದೆ.
ಟೀಂ ಇಂಡಿಯಾ ತಂಡದಿಂದ ದೂರ ಉಳಿದಿದ್ದ ಕರ್ನಾಟಕದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಹಾಗೂ ಭಾರತ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಮತ್ತೆ ಏಕದಿನ ತಂಡಕ್ಕೆ ಮರಳಿದ್ದಾರೆ. ತಂಡ ಸಾರಥ್ಯವನ್ನು ಅಜಿಂಕ್ಯಾ ರಹಾನೆಗೆ ನೀಡಲಾಗಿದೆ.
ಕಳೆದ 7 ತಿಂಗಳಿನಿಂದ ಭಾರತ ತಂಡ ಬಿಡುವಿಲ್ಲದಾ ವೇಳಾಪಟ್ಟಿಯಲ್ಲಿ ಸತತವಾಗಿ ಆಡುತ್ತಾ ಬಂದಿದ್ದು ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ, ಆರ್.ಅಶ್ವಿನ್, ಉಮೇಶ್ ಯಾದವ್ ಹಾಗೂ ಶಿಖರ್ ಧವನ್ ಗೆ ವಿಶ್ರಾಂತಿ ನೀಡಲಾಗಿದೆ.
ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಪಂದ್ಯ ಹಾಗೂ ಎರಡು ಟಿ20 ಪಂದ್ಯಗಳನ್ನಾಡಲಿದ್ದು, ಸರಣಿ ಜುಲೈ 10 ರಿಂದ ಆರಂಭಗೊಳ್ಳಲಿದೆ.
ಜಿಂಬಾಬ್ವೆ ಪ್ರವಾಸದಲ್ಲಿರು ಟೀಂ ಇಂಡಿಯಾ ಆಟಗಾರರು
* ಅಜಿಂಕ್ಯಾ ರಹಾನೆ (ನಾಯಕ)
* ಮುರಳಿ ವಿಜಯ್
* ಅಂಬಟ್ಟಿ ರಾಯುಡು
* ಮನೋಜ್ ತಿವಾರಿ
* ಕೇದಾರ್ ಜಾದವ್
* ರಾಬಿನ್ ಉತ್ತಪ್ಪ
* ಮನೀಶ್ ಪಾಂಡೆ
* ಹರ್ಭಜನ್ ಸಿಂಗ್
* ಸ್ಟುವರ್ಟ್ ಬಿನ್ನಿ
* ಕರ್ನ್ ಶರ್ಮಾ
* ಭುವನೇಶ್ವರ್ ಕುಮಾರ್
* ಮೋಹಿತ್ ಶರ್ಮಾ
* ಧವಾಲ್ ಕುಲಕರ್ಣಿ
* ಸಂದೀಪ್
* ಅಕ್ಸರ್