ಕ್ರೀಡೆ

ಎರಡನೇ ಸುತ್ತಿಗೆ ಅಶ್ವಿನಿ-ಜ್ವಾಲಾ

ಬರ್ಮಿಂಗ್‍ಹ್ಯಾಮ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಬುಧವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿಯು, ಮಲೇಷ್ಯಾದ ಜೋಡಿಯಾದ ಫೈ  ಚೂಸೂಂಗ್ ಮತ್ತು ಅಮೆಲಿಯಾ ಅಲಿಸಿಯಾ ಜೋಡಿಯನ್ನು 21-12, 22-20, 21-14 ಗೇಮïಗಳ ಅಂತರದಲ್ಲಿ ಪರಾಭವಗೊಳಿಸಿತು.

ಪಂದ್ಯದ ಆರಂಭದಿಂದ ಅಂತ್ಯದವರೆಗೂ ಎದುರಾಳಿ ಜೋಡಿ ವಿರುದ್ಧ ಮೇಲುಗೈ ಸಾಧಿಸಿದ ಭಾರತೀಯ ಜೋಡಿ ಪಂದ್ಯವನ್ನು ನೇರ ಗೇಮïಗಳ ಅಂತರದಲ್ಲಿ ಗೆಲವು ದಾಖಲಿಸಿತು. ಪಂದ್ಯದ ಆರಂಭಿಕ ಹಂತದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಅಶ್ವಿನಿ ಜೋಡಿ, 21-12 ಅಂತರದ ಮುನ್ನಡೆ ಪಡೆದುಕೊಂಡಿತು. ನಂತರ 2ನೇ ಗೇಮ್ ನಲ್ಲಿ ತೀವ್ರ ಹೋರಾಟ ಎದುರಿಸಿದರೂ ಮಲೇಷ್ಯಾ ಜೋಡಿಯನ್ನು ಅಶ್ವಿನಿ ಜೋಡಿ 22-20 ಅಂಕಗಳಿಂದ ಹಿಂದಿಕ್ಕಿತು. ಅಂತಿಮ ಗೇಮ್ ನಲ್ಲೂ 21-14 ಅಂಕಗಳ ಪ್ರಾಬಲ್ಯ ಮುಂದುವರಿಸುವ ಮೂಲಕ ಭಾರತದ ಜೋಡಿ ಗೆಲವು ದಾಖಲಿಸಿತು. ಈ ಮೂಲಕ ಅಶ್ವಿನಿ ಮತ್ತು ಜ್ವಾಲಾ ಜೋಡಿ ದ್ವಿತಿಯ ಸುತ್ತಿಗೆ ಪ್ರವೇಶಿಸಿದೆ.

ಈ ಜೋಡಿ ತಮ್ಮ ಮುಂದಿನ ಸುತ್ತಿನಲ್ಲಿ ವಿಶ್ವದ ನಂಬರ್ 1 ಜೋಡಿ ಚೈನೀಸ್ ತೈಪೇನ ಕಿಂಗ್ ಥೈನ್ ಮತ್ತು ಯುನ್ಲೆ ಜಾವ್ ಜೋಡಿಯನ್ನು ಎದುರಿಸಲಿದೆ. ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಜೋಡಿಯೂ ಚೈನೀಸ್ ತೈಪೇನ ಬೈ ಚೈ ಮತ್ತು ವೈ ಹಾಂಗ್ ವಿರುದ್ಧ 9-21, 21-17, 21-17 ಗೇಮ್ ಗಳ ಅಂತರದಲ್ಲಿ ಜಯ ಸಾಧಿಸಿತು. ಪಂದ್ಯದ ಮೊದಲ ಗೇಮ್ ನಲ್ಲಿ ಹಿನ್ನಡೆ ಅನುಭವಿಸಿದರೂ, ನಂತರದ ಎರಡು ಗೇಮ್ ಗಳಲ್ಲಿ ಮೇಲುಗೈ ಸಾಧಿಸಿದ ಭಾರತೀಯ ಜೋಡಿ ಪಂದ್ಯವನ್ನು ಗೆದ್ದುಕೊಂಡಿತು.

SCROLL FOR NEXT