ಕ್ರೀಡೆ

ಕ್ವಾರ್ಟರ್ ಫೈನಲ್ ಗೆ ಸೈನಾ

Srinivasamurthy VN

ಬರ್ಮಿಂಗ್‍ಹ್ಯಾಮ್: ಭಾರತದ ಅಗ್ರ ಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ವಿಶ್ವ ಬ್ಯಾಡ್ಮಿಂಟನ್‍ನಲ್ಲಿ 3ನೇ ಶ್ರಯಾಂಕ ಹೊಂದಿರುವ ಸೈನಾ ನೆಹ್ವಾಲ್, ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಗುರುವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರು, ಕೊರಿಯಾದ ಕಿಮ್ ಹ್ಯೊ ಮಿನ್ ವಿರುದ್ಧ 21-15, 21-15 ಗೇಮ್ ಗಳ ಅಂತರದಲ್ಲಿ ಜಯ ಸಾಧಿಸಿದರು. ಮೊದಲ ಗೇಮ್ ನಲ್ಲಿ ಆರಂಭದಿಂದಲೇ ಚುರುಕು ಆಟ ಪ್ರದರ್ಶಿಸಿದ ಸೈನಾ, ಮಿನ್ ವಿರುದಟಛಿ ಲಗುಬಗೆಯಲ್ಲಿ ಅಂಕಗಳನ್ನು ಪೇರಿಸುತ್ತಾ ಸಾಗಿ ಅನಾಯಾಸವಾಗಿ ಜಯ ಸಾಧಿಸಿದರು.

ಇನ್ನು, ಎರಡನೇ ಗೇಮ್ ನಲ್ಲೂ ಇದೇ ಆಟ ಮುಂದುವರಿಯಿತು. ಸೈನಾ ಪ್ರಾಬಲ್ಯದೆದುರು ಮಂಕಾದ ಮಿನ್, ಎರಡನೇ ಗೇಮ್ ನಲ್ಲೂ 21-15ರ ಅಂತರದಲ್ಲಿ ಶರಣಾದರು. ಈ ಮೂಲಕ, ಸೈನಾ ಕ್ವಾರ್ಟರ್  ಫೈನಲ್‍ಗೆ ಕಾಲಿಟ್ಟರು. ಅಲ್ಲಿ ಅವರು, ವಿಶ್ವ ಬ್ಯಾಡ್ಮಿಂಟನ್‍ನಲ್ಲಿ 5ನೇ ಶ್ರೇಯಾಂಕ ಹೊಂದಿರುವ ಚೀನಾದ ವಾಂಗ್ ಯಿಹಾನ್ ವಿರುದ್ಧ ಮುಖಾಮುಖಿಯಾಗಲಿದ್ದಾರೆ.

ಜ್ವಾಲಾ- ಅಶ್ವಿನಿ ಹೊರಕ್ಕೆ
ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿಯಾದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಎರಡನೇ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಡಬಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಜ್ವಾಲಾ-ಅಶ್ವಿನಿ, 10-21, 13-21 ನೇರ ಅಂಕಗಳಿಂದ ಚೀನಾದ ಅಗ್ರಶ್ರೇಯಾಂಕಿತ ಮತ್ತು ವಿಶ್ವದ ನಂಬರ್ ಒನ್ ಜೋಡಿ ಟಿಯಾನ್ ಕಿಂಗ್ ಮತ್ತು ಝಾವೊ ಯೂನ್‍ಲೇಯಿ ಎದುರು ಸೋಲನುಭವಿಸಿದರು.

SCROLL FOR NEXT