ವೈನ್ ಯಾರ್ಡ್ ನಲ್ಲಿ ವಾಲಿಬಾಲ್ ನಿರತರಾಗಿರುವ ಟೀ ಇಂಡಿಯಾ ಆಟಗಾರರು 
ಕ್ರೀಡೆ

ವೈನ್ ತವರಲ್ಲಿ ಟೀಂ ಇಂಡಿಯಾ

ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿರುವ ಧೋನಿ ನಾಯಕತ್ವದ ಪಡೆ, ಪರ್ತ್‍ನಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಅರೇವಿನಾ ವೈನ್‍ಯಾರ್ಡ್‍ಗೆ ಇತ್ತೀಚೆಗೆ ಭೇಟಿ..

ಪ್ರವಾಸ, ಸುತ್ತಾಟದ ಜೊತೆಗೆ ಅಭ್ಯಾಸವನ್ನೂ ನಡೆಸಿದ ಭಾರತ ತಂಡ

ಪರ್ತ್: ವಿದೇಶಗಳಲ್ಲಿ ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸಲಿ, ಸದ್ದಿಲ್ಲದೆ ಡಿನ್ನರ್‍ಗೆ ಹೋಗುವುದು, ಪ್ರಖ್ಯಾತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಟೀಂ ಇಂಡಿಯಾದ ನೆಚ್ಚಿನ ಹವ್ಯಾಸ.

ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿರುವ ಧೋನಿ ನಾಯಕತ್ವದ ಪಡೆ, ಪರ್ತ್‍ನಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಅರೇವಿನಾ ವೈನ್‍ಯಾರ್ಡ್‍ಗೆ ಇತ್ತೀಚೆಗೆ ಭೇಟಿ ನೀಡಿತ್ತು. ಅಲ್ಲಿ ಮನಸಾರೆ ಸುತ್ತಾಡಿದ ತಂಡದ ಸದಸ್ಯರು ಬೀಚ್ ವಾಲಿಬಾಲ್ ಆಡಿ ಮನರಂಜನೆ ಪಡೆದರು.

ಎಲ್ಲಾ ಮಾಮೂಲು...
ಮನಸ್ಸು ಪ್ರಫುಲ್ಲವಾಗಿದ್ದರೆ ಹೆಚ್ಚಿನದ್ದನ್ನು ಸಾಧಿಸಬಹುದು ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿರುವ ಧೋನಿ ಹುಡುಗರು, ತಮ್ಮ ನಂಬಿಕೆಗೆ ಕಿಂಚಿತ್ತೂ ಚ್ಯುತಿ ಬರದಂತೆ ಎಂಜಾಯ್ ಮಾಡುತ್ತಾರೆ. ಇದೇನೂ ಹೊಸತೇನಲ್ಲ ಬಿಡಿ. ಪಂದ್ಯಗಳಿದ್ದಾಗ ಮೈದಾನದಲ್ಲಿ ಬೆವರಿಳಿಸುವ ಅವರು ಹೀಗೆ ಜಾಲಿ ಮಾಡಿ ಮನಸ್ಸನ್ನು ಫ್ರೆಶ್ ಮಾಡಿಕೊಳ್ತಾರೆ. ಅದೇ ರೀತಿ, ಈ ತಂಡ ಸೋಮವಾರ ಸವಾರಿಗೆ ಹೊರಟದ್ದು.

ವೈನ್ ಸವಿದರು...
ತಾಣದ ಹೆಸರೇ ಸೂಚಿಸುವಂತೆ ವೈನ್‍ಯಾರ್ಡ್‍ನಲ್ಲಿರುವ ಸಾಂಪ್ರದಾಯಿಕ ವೈನ್ ತಯಾರಿಕಾ ಘಟಕಕ್ಕೂ ಭೇಟಿ ನೀಡಿದ ತಂಡ, ಅಲ್ಲಿನ ಚಟುವಟಿಕೆಗಳನ್ನು ಘಟಕದ ಸಿಬ್ಬಂದಿಯಿಂದ ಕೇಳಿ ತಿಳಿದುಕೊಂಡರು. ಅಲ್ಲದೆ, ಸಿಬ್ಬಂದಿ ನೀಡಿದ ವೈನ್ ಅನ್ನು ಟೇಸ್ಟ್ ಮಾಡಿದರು.

ನಿಲ್ಲದ ಅಲೆದಾಟ... ಬೀಚ್‍ನಲ್ಲಿ ಆಟೋಟ
ಮಾರ್ಗರೇಟ್ ನದಿಯ ತಟದಲ್ಲಿರುವ ಈ ಮನಮೋಹಕ ತಾಣದಲ್ಲಿ ಸಿಕ್ಕಾಪಟ್ಟೆ ಅಡ್ಡಾಡಿದ ಹುಡುಗರು, ಅಲ್ಲಿನ ಮನಮೋಹಕ ವಾತಾವರಣವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರು. ಕೆಲವರು ಬೀಚ್ ನಲ್ಲಿದ್ದ ಬಿಸಿಬಿಸಿ ಹವಾಗುಣದಿಂದ ತಮ್ಮ ತ್ವಚೆಗೆ ತೊಂದರೆಯಾದೀತೆಂದು ಮುನ್ನೆಚ್ಚರಿಕಾ ಕ್ರಮವಾಗಿ ಮೈಕೈಗಳಿಗೆ ಸನ್ ಕ್ರೀಂ ಬಳಿದುಕೊಂಡರು. ಶಿಖರ್ ಧವನ್ ಅಂತೂ ಸಲ್ಮಾನ್ ಖಾನ್ ಅವತಾರ ತಾಳಿದ್ದರು. ಅಡ್ಡಾಡಿ, ವಾಲಿಬಾಲ್ ಆಡಿ ನಂತರ ಕೊಂಚ ವಿಶ್ರಾಂತಿ ಪಡೆದ ಹುಡುಗರು, ನಂತರ ಭೋಜನ ಸವಿದು ಕೊಂಚ ರೆಸ್ಟ್ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT