ಐರ್ಲೆಂಡ್ ತಂಡದ ದಾಂಡಿಗರು 
ಕ್ರೀಡೆ

ಭಾರತ vs ಐರ್ಲೆಂಡ್ ಪಂದ್ಯ: ಭಾರತಕ್ಕೆ 260 ರನ್ ಗಳ ಗುರಿ

ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿಂದು ಭಾರತ ಮತ್ತು ಐರ್ಲೆಂಡ್ ನಡುವೆ ಸೆಣಸಾಟ ನಡೆದಿದ್ದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ...

ಸೆಡನ್ ಪಾರ್ಕ್, ಹ್ಯಾಮಿಲ್ಟನ್:  ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿಂದು ಭಾರತ ಮತ್ತು ಐರ್ಲೆಂಡ್ ನಡುವೆ ಸೆಣಸಾಟ ನಡೆದಿದ್ದು ಟಾಸ್ ಗೆದ್ದು  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ಭಾರತಕ್ಕೆ 260 ರನ್‌ಗಳ ಗುರಿ ನೀಡಿದೆ.

ಐರ್ಲೆಂಡ್ ತಂಡ ಆರಂಭದಲ್ಲಿಯೇ ಉತ್ತಮ ಆರಂಭವನ್ನು ಕಂಡುಕೊಳ್ಳುವ ಮೂಲಕ ಭಾರತಕ್ಕೆ ಸವಾಲೊಡ್ಡಿತ್ತು. ಆರಂಭಿಕ ದಾಂಡಿಗರಾದ ಪೋರ್ಟ್‌ಫೀಲ್ಡ್ ಮತ್ತು ಸ್ಟಿರ್ಲಿಂಗ್ ಉತ್ತಮ ಆರಂಭ ನೀಡಿದ್ದು, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

15ನೇ ಓವರ್‌ನಲ್ಲಿ ಅಶ್ವಿನ್ ಬಾಲ್‌ಗೆ  ಸ್ಟಿರ್ಲಿಂಗ್ ಔಟಾಗುವ ಮೂಲಕ ಭಾರತಕ್ಕೆ ಮೊದಲ ವಿಕೆಟ್ ದಕ್ಕಿತು. ಪೋರ್ಟರ್ ಫೀಲ್ಡ್ ಜತೆಗೆ ಉತ್ತಮ ಸಾಥ್ ನೀಡಿದ ಸ್ಟಿರ್ಲಿಂಗ್ 42 ಬಾಲ್‌ಗಳಲ್ಲಿ 42 ರನ್‌ಗಳನ್ನು ಗಳಿಸಿದ್ದರು. ನಂತರ ಕ್ರೀಸ್‌ಗಿಳಿದ ಜೋಯ್ಸಿ  2 ರನ್ ಗಳಿಸಿ ರೈನಾ ಬಾಲ್‌ಗೆ ಔಟಾದರು.  ಇದಾದ ನಂತರ ಪೋಟರ್‌ಫೀಲ್ಡ್‌ಗೆ ಸಾಥ್ ನೀಡಿದ್ದು ನೀಲ್ ಓಬ್ರಿಯಾನ್. ಇವರಿಬ್ಬರ ಜತೆಯಾಟದಿಂದಾಗಿ ಐರ್ಲೆಂಡ್ ಉತ್ತಮ ಸ್ಕೋರ್‌ಗಳಿಸಿ ಮುನ್ನಡೆಯುತ್ತಿದ್ದಂತೆ  ಮೋಹಿತ್ ಶರ್ಮಾ ಎಸೆತಕ್ಕೆ ಪೋರ್ಟ್‌ಫೀಲ್ಡ್ (67) ಔಟಾಗಿ ಪೆವಿಲಿಯನ್‌ಗೆ ನಡೆದರು.  ನಂತರ ಬಂದ ಕೆವಿನ್ ಓಬ್ರಿಯಾನ್ (1) ಮತ್ತು ವಿಲ್ಸನ್  (6 )ರನ್ ಗಳಿಸಿ ಬೇಗನೆ ಔಟಾದರು. ಒಟ್ಟೊಟ್ಟಿಗೆ ವಿಕೆಟ್ ಪತನವಾಗುವ ಮೂಲಕ ಐರ್ಲೆಡ್ ಸ್ಕೋರ್ ಕೂಡಾ ಮಂದಗತಿಯಲ್ಲಿ ಸಾಗಿತು. ಆದಾಗ್ಯೂ, ಭಾರತಕ್ಕೆ ನೀಲ್ ಓಬ್ರಿಯಾನ್‌ರ ವಿಕೆಟ್ ಅತ್ಯಂತ ಮಹತ್ವದ್ದಾಗಿತ್ತು. ಹೀಗಿರುವಾಗ 43ನೇ ಓವರ್‌ನಲ್ಲಿ ಮಹಮ್ಮದ್ ಶಮಿ ಅವರ ಬಾಲ್‌ಗೆ ನೀಲ್ ಯಾದವ್‌ಗೆ ಕ್ಯಾಚಿತ್ತು ಔಟಾದರು. ನೀಲ್ ಔಟಾದ ಕೂಡಲೇ  43ನೇ ಓವರ್‌ನಲ್ಲಿ ಥಾಮ್ಸನ್‌ನ್ನು ಕೊಹ್ಲಿ ರನೌಟ್ ಮಾಡಿದರು.
40 ಓವರ್‌ನ ನಂತರದ ಮೂರು ಓವರ್‌ಗಳಲ್ಲಿ ಐರ್ಲೆಂಡ್ ಒಟ್ಟೊಟ್ಟಿಗೆ 3 ವಿಕೆಟ್ ಕಳೆದುಕೊಂಡಿತು.

ಇದಾದ ಮೇಲೆ 49ನೇ ಓವರ್‌ನಲ್ಲು ಕುಸಕ್ ನ್ನು ಮೊಹಮ್ಮದ್ ಶಮಿ ಔಟ್ ಮಾಡುವ ಮೂಲಕ ಐರ್ಲೆಂಡ್ ಆಲೌಟ್ ಆಯಿತು. 12 ರನ್ ಗಳಿಸಿದ ಮೂನಿ ಅಜೇಯರಾಗಿ ಉಳಿದರು.

49 ಓವರ್‌ಗಳಲ್ಲಿ 259 ರನ್ ದಾಖಲಿಸಿರುವ ಪ್ರಸ್ತುತ ತಂಡ ಭಾರತಕ್ಕೆ  260 ರನ್‌ಗಳ ಗುರಿ ನೀಡಿದೆ.

ಭಾರತದ ಪರವಾಗಿ ಶಮಿ 3 ವಿಕೆಟ್ ಮತ್ತು ಅಶ್ವಿನ್ 2 ವಿಕೆಟ್ ಗಳಿಸಿದ್ದಾರೆ. ಅದೇ ವೇಳೆ ಯಾದವ್, ಮೋಹಿತ್ ಶರ್ಮಾ, ಜಡೇಜಾ, ರೈನಾ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT