ಕ್ರೀಡೆ

ವಿನಯ್ ಕುಮಾರ್ ಶತಕ; ಗೆಲುವಿನತ್ತ ಕರ್ನಾಟಕ ದಾಪುಗಾಲು

Guruprasad Narayana

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ಸ್ ಪಂದ್ಯದಲ್ಲಿ ತಮಿಳುನಾಡಿನ ವಿರುದ್ಧ ಗೆಲುವಿನತ್ತ ಕರ್ನಾಟಕ ದಾಪುಗಾಲು ಹಾಕಿದೆ.

ಇಂದು ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರೆಸಿದ ಕರ್ನಾಟಕ, ಕೆ ಕೆ ನಾಯರ್ ೩೨೮ ರನ್ ಗಳಿಸುವುದರೊಂದಿಗೆ ರಣಜಿ ಫೈನಲ್ ಪಂದ್ಯದ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದರು. ಇವರಿಗೆ ಸಾಥ್ ನೀಡಿದ ನಾಯಕ ಮತ್ತು ವೇಗದ ಬೌಲರ್ ವಿನಯ್ ಕುಮಾರ್ ಲೀಲಾಜಾಲವಾಗಿ ಶತಕ ಗಳಿಸಿ ಅಚ್ಚರಿ ಮೂಡಿಸಿದರು. ನಂತರ ಕರ್ನಾಟಕ ತಂಡ ೭೬೨ ರನ್ ಗಳಿಗೆ ಆಲೌಟ್ ಆಯಿತು.

೬೨೮ ರನ್ನುಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ತಮಿಳುನಾಡಿಗೆ ಆಘಾತ ಕಾದಿತ್ತು. ದಿನದಂತ್ಯಕ್ಕೆ ತಮಿಳುನಾಡು ಮೂರು ವಿಕೆಟ್ ನಷ್ಟಕ್ಕೆ ೧೧೩ ಗಳಿಸಿ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ನಾಳೆ ಇಡೀ ಬ್ಯಾಟಿಂಗ್ ಮಾಡಬೇಕಿದೆ.

ಉತ್ತಮ ಸ್ಥಿತಿಯಲ್ಲಿರುವ ಕರ್ನಾಟಕ ಈಗ ಗೆಲುವಿನತ್ತ ದಾಪುಗಾಲು ಹಾಕಿದೆ. ಒಂದು ಪಕ್ಷ ಪಂದ್ಯ ಡ್ರಾ ಆದರೂ ಕೂಡ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಎಂಟನೇ ಬಾರಿಗೆ ರಣಜಿ ಟ್ರೋಫಿ ಪಡೆಯುವುದು ಖಚಿತವಾಗಿದ್ದು, ವಿನಯ್ ಕುಮಾರ್ ಬಳಗ ಅತೀವ ಸಂತಸದಲ್ಲಿದೆ.

SCROLL FOR NEXT