ಕ್ರೀಡೆ

ಆರ್ಚರಿ ಸಾಧನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮೂರು ವರ್ಷದ ಬಾಲಕಿ

Guruprasad Narayana

ವಿಜಯವಾಡ: ಹಿರಿಯ ಕ್ರೀಡಾಪಟುಗಳ ಮುಂದೆ ಆರ್ಚರಿಯಲ್ಲಿ (ಬಿಲ್ವಿದ್ಯೆ) ೩೮೮ ಅಂಕ ಗಳಿಸಿ, ಮೂರು ವರ್ಷದ ಆಂಧ್ರ ಪ್ರದೇಶದ ಬಾಲಕಿ ಬಿಲ್ವಿದ್ಯಾ ಪ್ರವೀಣೆ ಚೆರುಕಲಿ ದಲ್ಲಿ ಶಿವಾನಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರಿ ದಾಖಲೆ ಮಾಡಿದ್ದಾಳೆ.

ಐದು ಮೀಟರ್ ಮತ್ತು ಏಳು ಮೀಟರ್ ದೂರದಿಮ್ದ ೩೬ ಬಾಣಗಳನ್ನು ಹೊಡೆದು ೩೮೮ ಅಂಕ ಗಳಿಸಿ ಈ ಸಾಧನೆಗೈದಿದ್ದಾಳೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಪ್ರತಿನಿಧಿ ವಿಶ್ವಜೀರ್ ರೇ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರತಿನಿಧಿ ಪಿ ರಾಮಕೃಷ್ಣ ಈ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ದಾಖಲಾಗಿರುವುದನ್ನು ಘೋಷಿಸಿ ಪ್ರಮಾಣಪತ್ರಿ ನೀಡಿದ್ದಾರೆ.

೨೦೧೦ರ ರಸ್ತೆ ಅಪಘಾತದಲ್ಲಿ ನಿಧನರಾದ ಅಂತರಾಷ್ಟ್ರೀಯ ಆರ್ಚರಿ ಚಾಂಪಿಯನ್ ಚೆರುಕುಲಿ ಲೆನಿನ್ ಅವರ ಕಿರಿಯ ಸಹೋದರಿ ಶಿವಾನಿ. ಚ ಸತ್ಯನಾರಾಯಣ ಅವರ ವೋಲ್ಗಾ ಆರ್ಚರಿ ಇನ್ಸ್ಟಿಟ್ಯುಟ್ ನಲ್ಲಿ ಈ ಬಾಲಕಿ ತರಬೇತಿ ಪಡೆದಿದ್ದಾಳೆ.

SCROLL FOR NEXT