ನವದೆಹಲಿ: ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೊಳಪಟ್ಟಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ಅಂತಿಮ ತೀರ್ಪು ಮೇ 23ರಂದು ಹೊರಬೀಳಲಿದೆ. ಶುಕ್ರವಾರ ನಡೆದ ವಿಚಾರಣೆ ವೇಳೆ, ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ ಮೋಹನ್ ತಾವು ಮಂಡಿಸಿರುವ ವಾದಕ್ಕೆ ಪೂರಕವಾಗಿ ಲಿಖಿತ ರೂಪದ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದರು.
ಇದನ್ನು ಸ್ವೀಕರಿಸಿದ ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶರಾದ ನ್ಯಾ. ನೀನಾ ಬನ್ಸಾಲ್ ಕೃಷ್ಣ ಅವರು ತೀರ್ಪನ್ನು ಮೇ 23ಕ್ಕೆ ಕಾಯ್ದಿರಿಸಿದ್ದರು.
2013 ರ ಐಪಿಎಲ್ ಆವೃತ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದ ಫಿಕ್ಸಿಂಗ್ ಪ್ರಕರಣವನ್ನು ದೆಹಲಿ ಪೊಲೀಸರು ಅದೇ ವರ್ಷ ಬಯಲಿಗೆಳೆದಿದ್ದರು. ಫಿಕ್ಸಿಂಗ್ ನಡೆಸಿದ ಆರೋಪದ ಮೇರೆಗೆ ಶ್ರೀಶಾಂತ್, ಅಜಿತ್ ಚಾಂಡೀಲಾ, ಹಾಗೂ ಅಂಕಿತ್ ಚೌಹಾನ್ ಅವರನ್ನು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತಮ ಸಹಚರರಾದ ಚೋಟಾ ಶಕೀಲ್ ಅವರನ್ನೂ ಆರೋಪಿಗಳೆಂದು ಪರಿಗಣಿಸಲಾಗಿದೆ.