ಸ್ಪೇನಿನ ರಾಫೆಲ್ ನಡಾಲ್ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್, ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಹೆಜ್ಜೆ ಹಾಕಿದ್ದಾರೆ. 
ಕ್ರೀಡೆ

ನಡಾಲ್,ಜೊಕೊ ಮುನ್ನಡೆ

ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್, ಸ್ಪೇನಿನ ರಾಫೆಲ್ ನಡಾಲ್ ಹಾಗೂ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಹೆಜ್ಜೆ ಹಾಕಿದ್ದಾರೆ...

ಪ್ಯಾರಿಸ್ :ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್, ಸ್ಪೇನಿನ ರಾಫೆಲ್ ನಡಾಲ್ ಹಾಗೂ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಹೆಜ್ಜೆ ಹಾಕಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕಿತ ನಡಾಲ್, 6-3,6-3,6-4 ನೇರ ಸೆಟ್ ಗಳಿಂದ ಫ್ರಾನ್ಸ್ ನ ಕ್ವೆಂಟಿನ್ ಹಾಲೇಸ್ ಅವರನ್ನು ಪರಾಭವಗೊಳಿಸಿದರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ತಮ್ಮ ಅನುಭವವನ್ನು ಪರಿಣಾಮಕಾರಿಯಾಗಿ ಧಾರೆಯೆರೆದ ನಡಾಲ್, ಅಂತಿಮವಾಗಿ ನಿರೀಕ್ಷಿತ ಗೆಲುವು ದಾಖಲಿಸುವಲ್ಲಿ ಸಫಲರಾದರು. ಅಚ್ಚರಿ ಎಂದರೆ ಈ ಪಂದ್ಯದಲ್ಲಿ ನಡಾಲ್ ಒಂದೂ ಏಸ್ ಬಾರಿಸಲಿಲ್ಲ. ಆದರೆ, ಎದುರಾಳಿ ಆಟಗಾರ ಹಾಲೇಸ್ 5 ಏಸ್ ಗಳನ್ನು ಸಿಡಿಸಿದರು. ನಡಾಲ್ ಗೆ ಪಂದ್ಯದುದ್ದಕ್ಕೂ ಉತ್ತಮ ಸವಾಲುಗಳನ್ನೇ ನಿಲ್ಲಿಸಿದ್ದ ಫ್ರಾನ್ಸ್ ಆಟಗಾರ, ಅನಗತ್ಯ ತಪ್ಪುಗಳನ್ನು ಎಸಗುವ ಮೂಲಕ ಕೊನೆಗೆ ನೇರ ಸೆಟ್ ಗಳ ಸೋಲು ಕಾಣಬೇಕಾಯಿತು.

ಪುರುಷರ ವಿಭಾಗದ ಇನ್ನಿತರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯಗಳಲ್ಲಿ 7ನೇ ಶ್ರೇಯಾಂಕಿತ ಸ್ಪೇನಿನ ಡೇವಿಡ್ ಫೆರರ್, 6-1,6-3,6-1 ಸೆಟ್ ಗಳಿಂದ ಸ್ಲೊವಾಕಿಯಾದ ಲೂಕಾಸ್ ಲ್ಯಾಕೊ ಅವರನ್ನು ಸೋಲಿಸಿದರು. ಕ್ರೊವೇಷಿಯಾದ 9ನೇ ಶ್ರೇಯಾಂಕಿತ ಮಾರಿನ್ ಸಿಲಿಕ್,6-2,6-4,6-2ರಿಂದ ಹಾಲೆಂಡ್ ನ ರಾಬಿನ್ ಹಾಸೆಗೆ ಸೋಲುಣಿಸಿದರು.

ಫ್ರಾನ್ಸ್ ನ ಜೆರೆಮಿ ಚಾರ್ಡಿ ಮೊದಲ ಹೆಜ್ಜೆಯಲ್ಲಿ ಕಷ್ಟಕರ ಗೆಲುವು ದಾಖಲಿಸಿ ಎರಡನೇ ಸುತ್ತಿಗೆ ತೇರ್ಗಡೆ ಹೊಂದಿದ್ದಾರೆ. ಉತ್ತಮ ಪೈಪೋಟಿಯಿಂದ ಕೂಡಿದ್ದ ಮೊದಲ ಸುತ್ತಿನ ಮುಖಾಬಲದಲ್ಲಿ ಚಾರ್ಡಿ ಅವರು, 4-6,6-3,6-4,6-4 ಸೆಟ್ ಗಳಿಂದ ಜರ್ಮನಿಯ ಮೈಕೆಲ್ ಬೆರರ್ ವಿರುದ್ಧ ಜಯ ಸಂಪಾದಿಸಿದರು.

ಜೊಕೊ ದ್ವಿತೀಯ ಸುತ್ತಿಗೆ
ವಿಶ್ವದ ನಂಬರ್ ವನ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು, ಫ್ರೆಂಚ್ ಓಪನ್ ನ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಫಿನ್ಲೆಂಡಿನ ಜಾರ್ಕೊ ನೇಮಿನೆನ್ ವಿರುದ್ಧ ಸೆಣೆಸಿದ ಅವರು, 6-2,7-5 ಹಾಗೂ 6-2 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರು.

ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಆರಂಭದಿಂದಲೂ ಚುರುಕಿನ ಆಟ ಪ್ರದರ್ಶಿಸಿದ ಸರ್ಬಿಯಾದ ಆಟಗಾರ ಜೊಕೊವಿಚ್, ಮೊದಲ ಸೆಟ್ ಅನ್ನು ಅನಾಯಾಸವಾಗಿ ಗೆದ್ದರು. ಆದರೆ, ಎರಡನೇ ಸೆಟ್ ನಲ್ಲಿ ಅವರಿಗೆ ನೇಮಿನೆನ್ ಅವರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಆದರೂ, ಅದನ್ನು ಮೀರಿದ ಜೊಕೊ, ಈ ಸೆಟ್ ನಲ್ಲಿ ಜಯಭೇರಿ ಬಾರಿಸಿದರು.

ಅನಂತರ, ಮೂರನೇ ಸೆಟ್ ನಲ್ಲಿ ಫಿನ್ಲೆಂಡಿಗನನ್ನು ಪುನ್ಹ ಅನಾಯಾಸವಾಗಿ ಮಣಿಸುವಲ್ಲಿ ಯಶಸ್ವಿಯಾದ ಅವರು, ಟೂರ್ನಿಯ ಎರಡನೇ ಸುತ್ತಿಗೆ ಪಾದಾರ್ಪಣೆ ಮಾಡಿದರು.

ಕ್ವಿಟೋವಾ ಶುಭಾರಂಭ:
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೊವಾ ಕೂಡಾ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಮಂಗಳವಾರವೇ ನಡೆದ ಮೊದಲ ಸುತ್ತಿನ ಸೆಣಸಿನಲ್ಲಿ ಅವರು, 6-4,3-6,6-4ರಿಂದ ನ್ಯೂಜಿಲ್ಯಾಂಡ್ ನ ಮಾರಿನಾ ಎರಾಕೊವಿಚ್ ಅವರಿಗೆ ಸೋಲುಣಿಸಿದರು.

ಮತ್ತೊಬ್ಬ ಅಗ್ರಮಾನ್ಯ ಆಟಗಾರ್ತಿ ಡೆನ್ಮಾರ್ಕ್ ನ ಕರೊಲಿನೆ ವೋಜ್ನಿಯಾಕಿ ಮೊದಲ ಸುತ್ತು ಗೆದ್ದು ಶುಭಾರಂಭ ಮಾಡಿದ್ದಾರೆ. ಐದನೇ ಶ್ರೇಯಾಂಕ ಹೊಂದಿರುವ ವೋಜ್ನಿಯಾಕಿ, ತಮ್ಮ ಮೊದಲ ಸೆಣಸಿನಲ್ಲಿ  ಇಟಲಿಯ ಕರಿನ ನಾಪ್ ವಿರುದ್ಧ 6-3,6-0 ನೇರ ಸೆಟ್ ಗಳಿಂದ ಗೆಲುವು ದಾಖಲಿಸಿದರು.

ಮಹಿಳೆಯರ ಗುಂಪಿನ ಇನ್ನಿತರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯಗಳಲ್ಲಿ 18ನೇ ಶ್ರೇಯಾಂಕಿತೆ ರಷ್ಯಾದ ಸ್ವೆಟ್ಲಾನಾ ಕುಜ್ನೇತ್ಸೊವಾ 6-1,4-6,6-2ರಿಂದ ಹಾಲೆಂಡ್ ನ ಕಿಕಿ ಬೆರ್ಟನ್ಸ್ ರನ್ನು ಮಣಿಸಿದರು.

ಸೆರೆನಾಗೆ ಜಯ
ನಂಬರ್ ವನ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಮಂಗಳವಾರ ನಡೆದ ಫ್ರೆಂಚ್ ಓಪನ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಚೆಕ್ ಗಣರಾಜ್ಯದ ಆ್ಯಂಡ್ರಿಯಾ ಹ್ಲಾವಕೊವಾ ವಿರುದ್ಧ 6-2,6-3 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿ,2ನೇ ಸುತ್ತಿಗೆ ಕಾಲಿಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕುರ್ಚಿ ಕಾಳಗ: ಸಿದ್ದರಾಮಯ್ಯ, ಡಿಕೆಸಿ ಜತೆ ರಾಹಲ್ ಗಾಂಧಿ ಪ್ರತ್ಯೇಕ ಚರ್ಚೆ; ಕುತೂಹಲ ಮೂಡಿಸಿದೆ ಚುಟುಕು ಮಾತುಕತೆ! Video

ಇರಾನ್ ಪ್ರತಿಭಟನೆಯಲ್ಲಿ 2000 ಜನ ಸಾವು; ಇದಕ್ಕೆ ಉಗ್ರರು ಕಾರಣ ಎಂದ ಅಧಿಕಾರಿಗಳು

Toxic Teaserನಲ್ಲಿ 'ಟೂ ಮಚ್ ಸೆಕ್ಸ್' ಇದೆಯೇ? CBFCಗೆ ಮತ್ತೊಂದು ದೂರು!

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

IPL 2026: RCB ತವರು ಮೈದಾನ ಕೊನೆಗೂ ಬಹುತೇಕ ಫಿಕ್ಸ್, ಈ ಎರಡು ಮೈದಾನಗಳಲ್ಲೇ ಪಂದ್ಯ!

SCROLL FOR NEXT