ಕ್ರೀಡೆ

ಬ್ರಿಟಿಷ್ ಏರ್‌ವೇಸ್ ಬಗ್ಗೆ ಸಚಿನ್ ಬೇಸರ, ಇನ್ನೆಂದಿಗೂ ಆ ವಿಮಾನ ಹತ್ತಲ್ಲ ಎಂದ ಕ್ರಿಕೆಟ್ ದೇವರು

Lingaraj Badiger

ಲಂಡನ್: ಪೂರ್ಣ ಹೆಸರು ಕೇಳುವ ಮೂಲಕ ತಮ್ಮನ್ನು ಅವಮಾನ ಮಾಡಿದ ಬ್ರಿಟಿಷ್ ಏರ್‌ವೇಸ್ ಬಗ್ಗೆ  ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ ಬ್ರಿಟಿಷ್ ಏರ್‌ವೇಸ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಚಿನ್, ಸೀಟು ಖಾಲಿಯಿದ್ದರೂ ನನ್ನ ಕುಟುಂಬಕ್ಕೆ ಟಿಕೆಟ್ ನೀಡಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ಏರ್‌ವೇಸ್ ಸಿಬ್ಬಂದಿ ನಮ್ಮ ಲಗೇಜ್‌ಅನ್ನು ಬೇರೆಯ ಸ್ಥಳಕ್ಕೆ ತಲುಪಿಸಿದ್ದರು ಎಂದು ಮಾಜಿ ಕ್ರಿಕೆಟಿಗ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇನ್ನೆಂದಿಗೂ ಆ ವಿಮಾನ ಹತ್ತುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಭಯ ದೇಶಗಳ ನಡುವೆ ಸಂಬಂಧ ವೃದ್ದಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಲಂಡನ್‌ನಲ್ಲಿ ಇರುವಾಗಲೇ ಸಚಿನ್ ಅವರ ಪೂರ್ಣ ಹೆಸರು ಕೇಳುವ ಮೂಲಕ ಬ್ರಿಟಿಷ್ ಏರ್‌ವೇಸ್ ಕ್ರಿಕೆಟ್ ದೇವರಿಗೆ ಅವಮಾನ ಮಾಡಿದೆ.

SCROLL FOR NEXT