ಹುರ್ಘಾಡಾ (ಈಜಿಪ್ಟ್): ಭಾರತದ ಅತ್ಯಂತ ಯಶಸ್ವಿ ಸ್ನೂಕರ್ ಆಟಗಾರ ಬೆಂಗಳೂರಿನ ಪಂಕಜ್ ಆಡ್ವಾಣಿ, ತಮ್ಮ ವೃತ್ತಿ ಜೀವನದ 15ನೇ ವಿಶ್ವ ಚಾಂಪಿಯನ್‍ಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಶನಿವಾರ ಈಜಿಪ್ಟ್‍ನ ಕ್ರಿಸ್ಟಲ್ ಬೇ ರೆಸಾರ್ಟ್ ನಲ್ಲಿ ನಡೆದ ಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಂಕಜ್ ಆಡ್ವಾಣಿ ತಮ್ಮ ಪ್ರತಿಸ್ಪರ್ಧಿ ಚೀನಾದ ಎದುರಾಳಿ ಜುವಾ ಕ್ಸಿಂಟಾಂಗ್ ವಿರುದ್ಧ 8-6 (127--6, 75--16, 29--68, 63--23, 87- 01, 16--72, 110--13, 113--01, 52--65,13--84, 77--36, 14-1-26, 26--82, 116-
-24) ಫ್ರೇಮ್ ಗಳ ಅಂತರದಲ್ಲಿ ಜಯಿಸಿದರು. ಕಳೆದ ಸೆಪ್ಟೆಂಬರ್‍ನಲ್ಲಿ ಐಬಿಎಸ್‍ಎಫ್ ಬಿಲಿಯರ್ಡ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಪಂಕಜ್ ಆಡ್ವಾಣಿ, ಮೂರು ತಿಂಗಳ ಅವಧಿಯಲ್ಲಿ
ಎರಡನೇ ವಿಶ್ವ ಚಾಂಪಿಯನ್ ಕಿರೀಟ ಅಲಂಕರಿಸಿದ್ದಾರೆ. ಮೊದಲ ಬಾರಿಗೆ 2003ರಲ್ಲಿ ಈ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದಿದ್ದ ಪಂಕಜ್, 12 ವರ್ಷಗಳ ನಂತರ ಈ ಗರಿ ಮುಡಿಗೇರಿಸಿ
ಕೊಂಡಿದ್ದಾರೆ. ಭಾರತದ ಐಕಾನ್ ಆಟಗಾರನಾಗಿರುವ 30 ವರ್ಷದ ಪಂಕಜ್, ಪಂದ್ಯದ ಮೊದಲ ಅವಧಿಯಲ್ಲೇ 5-2ರ ಮುನ್ನಡೆ ಸಾಧಿಸಿದ್ದರು. ಪಂದ್ಯದ ದ್ವಿತೀಯ ಅವಧಿ ಆರಂಭವಾದ ನಂತರ
ಉತ್ತಮ ಆಟ ಮುಂದುವರಿಸಿದ್ದ ಆಡ್ವಾಣಿ ತಮ್ಮ ಅಂತರವನ್ನು 6-2ಕ್ಕೆ ಹೆಚ್ಚಿಸಿಕೊಂಡ ಆಡ್ವಾಣಿ,ನಂತರ ಮಂಕಾದರು. ಈ ವೇಳೆ ಫಿನಿಕ್ಸ್‍ನಂತೆ ಎದ್ದುಬಂದ ಚೀನಾದ ಪ್ರತಿಭಾವಂತ ಆಟಗಾರ ಪಂದ್ಯದಲ್ಲಿ ಅತ್ಯುತ್ತಮ ರೀತಿಯ ಪ್ರತಿರೋಧ ನೀಡಿದರು. ಆ ಮೂಲಕ ಸತತ ಎರಡು ಫ್ರೇಮ್ ಗಳನ್ನು ಬಾಚಿಕೊಂಡ ಕ್ಸಿಂಟಾಂಗ್, 4-6ಕ್ಕೆ ಅಂತರ ಇಳಿಸಿಕೊಂಡರು. ನಂತರದ ಫ್ರೇಮ್ ಅನ್ನು ಪಂಕಜ್ ಗೆದ್ದುಕೊಂಡರಾದರೂ, ಆನಂತರ ಮತ್ತೆ ಮಿಂಚಿದ ಕ್ಸಿಂಟಾಂಗ್ ಸತತ ಎರಡು ಫ್ರೇಮ್ ಗಳನ್ನು ಗೆದ್ದು 6-7ರ ಅಂತರಕ್ಕೆ ಬಂದು ನಿಂತರು.ಪಂದ್ಯದ 13 ಫ್ರೇಮ್ ಗಳ ಮುಕ್ತಾಯದ ವೇಳೆಗೆ ಪಂಕಜ್ ಒಂದು ಫ್ರೇಮ್ ಅಂತರ ಕಾಯ್ದುಕೊಂಡಿದ್ದರು. ಗೆಲವಿಗಾಗಿ ಇನ್ನು ಒಂದು ಫ್ರೇಮ್ಅನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕಿತ್ತು. ಪಂದ್ಯದ 14ನೇ ಫ್ರೇಮ್ ನಲ್ಲಿ ಮತ್ತೆ ಹಿಡಿತ ಸಾ„ಸಿದ ಪಂಕಜ್, ಕ್ಸಿಂಟಾಂಗ್ ಮೇಲೆ ನಿಯಂತ್ರಣ ಪಡೆದರು. ಈ ಫ್ರೇಮ್ ಅನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಪಂಕಜ್ ಒಂದೇ ವರ್ಷದಲ್ಲಿ ಅಲ್ಪ ಹಾಗೂ ದೀರ್ಘ ಮಾದರಿಯ ವಿಶ್ವ ಚಾಂಪಿಯನ್‍ಶಿಪ್ ಗೆದ್ದ ಸಾಧನೆ ಮಾಡಿದ್ದಾರೆ