ಕ್ರೀಡೆ

ಪಂದ್ಯ ಗೆದ್ದರೂ ಸರಣಿ ಸೋತ ಭಾರತ

Srinivas Rao BV

ರಾಯ್ಪುರ: ಪಂದ್ಯದ ಅಂತಿಮ ನಿಮಿಷದಲ್ಲಿ ಆಕಾಶ್ ದೀಪ್ ಸಿಂಗ್ ಗಳಿಸಿದ ಗೋಲಿನ ನೆರವಿನಿಂದ ಭಾರತ ಹಾಕಿ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿದರೂ, ಸರಣಿಯನ್ನು ಶೂಟೌಟ್‍ನಲ್ಲಿ ಕೈಚೆಲ್ಲಿತು.
ಆತಿಥೇಯ ಭಾರತ ತಂಡ 3-2 ಗೋಲುಗಳ ಅಂತರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿತು. ಸರಣಿಯ ಮೊದಲ ಪಂದ್ಯ 2-2ರಿಂದ ಡ್ರಾ ಕಂಡಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡಿತ್ತು. ಹೀಗಾಗಿ ಸರಣಿಯಲ್ಲಿ ಇತ್ತಂಡಗಳೂ 1-1 ಸಮಬಲ ಸಾಧಿಸಿತು. ಸಮಬಲದ ಜತೆಗೆ ಎರಡೂ ತಂಡಗಳು ಒಟ್ಟಾರೆಯಾಗಿ ತಲಾ 6 ಗೋಲು ಗಳಿಸಿದ್ದರಿಂದ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಈ ಶೂಟೌಟ್‍ನಲ್ಲಿ ಆಸ್ಟ್ರೇಲಿಯಾ ತಂಡ 3-2 ಗೋಲಿನಿಂದ ಮುನ್ನಡೆ ಪಡೆದು ಸರಣಿ ಜಯಿಸಿತು. ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ, ಪ್ರವಾಸಿಗರಿಗೆ ಪ್ರಬಲ ಸವಾಲು ನೀಡಿತು. ಪಂದ್ಯದ 17ನೇ ನಿಮಿಷದಲ್ಲಿ ಕರ್ನಾಟಕದ ಆಟಗಾರ ವಿ.ಆರ್.ರಘುನಾಥ್ ಅವರ ಆಕರ್ಷಕ ಗೋಲಿನಿಂದ ಭಾರತ ತಂಡ ಗೋಲಿನ ಖಾತೆ ತೆರೆಯಿತು. ನಂತರ ಭಾರತ ಆಸ್ಟ್ರೇಲಿಯಾ ಆಟಗಾರರ ಮೇಲೆ ಒತ್ತಡ ಹಾಕಿದರು. ಆ ಮೂಲಕ ಭಾರತ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ 1-0 ಮುನ್ನಡೆ ಸಾ„ಸಿತು. ಪಂದ್ಯದ ದ್ವಿತಿಯಾರ್ಧದಲ್ಲಿ ಪ್ರವಾಸಿ ಕಾಂಗರೂ ಪಡೆ ತೀವ್ರ ಪ್ರತಿರೋಧ ನೀಡಿತಾದರೂ, ಭಾರತ ತಂಡ ತನ್ನ ನಿಯಂತ್ರಣ ಕಳೆದುಕೊಳ್ಳದೇ ಸಂಘಟಿತ ಆಟ  ಪ್ರದರ್ಶಿಸಿ ಪಂದ್ಯದ ಮೇಲಿನ ಹಿಡಿತ ಮುಂದುವರಿಸಿತು.

SCROLL FOR NEXT