ಕ್ರೀಡೆ

ಪಿಎಸ್‍ಎಲ್‍ನಲ್ಲಿ ಭಾರತೀಯರು?

Srinivas Rao BV

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಬಹು ನಿರೀಕ್ಷಿತ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಟೂರ್ನಿಯಲ್ಲಿ ಭಾರತದ ಕ್ರಿಕೆಟಿಗರು ಭಾಗವಹಿಸುವು ದನ್ನು ಇಚ್ಛಿಸಿ ಮನವಿ ಮಾಡಿದರೆ, ಈ ಬಗ್ಗೆ ಚಿಂತನೆ ನಡೆಸುವುದಾಗಿ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿರುವ ಅವರು, "ಈ ಕುರಿತು ಪಿಸಿಬಿಯಿಂದ ಇಲ್ಲಿಯವರೆಗೂ ಯಾವುದೇ ರೀತಿಯ ಮನವಿ ಬಂದಿಲ್ಲ. ಅವರು ನಮ್ಮನ್ನು ಸಂಪರ್ಕಿಸಿದರೆ, ಆ ಬಗ್ಗೆ ಚಿಂತನೆ ನಡೆಸಲಾಗುವುದು'' ಎಂದು ತಿಳಿಸಿದರು. ಈ ಪಿಎಸ್‍ಎಲ್ ಟೂರ್ನಿ ಮುಂದಿನ ವರ್ಷ ಫೆಬ್ರವರಿ ನಾಲ್ಕರಿಂದ ದುಬೈನಲ್ಲಿ ನಡೆಸಲು ನಿರ್ಧರಿಸ ಲಾಗಿದೆ ಎಂದರು.

SCROLL FOR NEXT