ಕ್ರೀಡೆ

ಚಾಂಪಿಯನ್ನರಿಗೆ ಚೆನ್ನೈಯಿನ್ ಎಫ್ಸಿ ಚೊಚ್ಚಲ ಸವಾಲು

Mainashree

ಚೆನ್ನೈ: ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್) ಫುಟ್ಬಾಲ್ ಟೂರ್ನಿಯ ಎರಡನೇ ಆವೃತ್ತಿಯ ಪಂದ್ಯಾವಳಿ ಶನಿವಾರದಿಂದ ಅದ್ಧೂರಿ ಯಾಗಿ ಆರಂಭಗೊಳ್ಳಲಿದೆ.

ಎಂಟು ತಂಡಗಳು ಕಣಕ್ಕಿಳಿಯುವ ಟೂರ್ನಿ, ಡಿಸೆಂಬರ್ 20ರವರೆಗೆ ನಡೆಯಲಿದೆ. ಶನಿವಾರ ಸಂಜೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಾಲಿವು ಡ್ ನಟಿ ಐಶ್ವರ್ಯ ಬಚ್ಚನ್ ಅವರಿಂದ ನೃತ್ಯ ಮಾಡಲಿದ್ದಾರೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ಹಾಗೂ ಚೆನ್ನೈಯಿನ್ ಎಫ್ಸಿ ಸೆಣಸಲಿವೆ.

ಆತ್ಮವಿಶ್ವಾಸದಲ್ಲಿ ಚೆನ್ನೈಯಿನ್: ಚೆನ್ನೈನ ಜವಾಹರ್‍ಲಾಲ್ ನೆಹರೂ ಕ್ರೀಡಾಂಗಣ ಚೆನ್ನೈಯಿನ್‍ಗೆ ತವರಿನ ಅಂಗಣವಾಗಿದೆ. ವಿಶ್ವ ಚಾಂಪಿಯನ್ ಮಾರ್ಕೋ ಮಾಟೆರೆಜ್ಜಿ (ಇಟಲಿ) ಅವರ ಗರಡಿಯಲ್ಲಿ ಪಳಗಿರುವುದು ಚೆನ್ನೈ ಬಳಗದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಶುಭಾರಂಭದ ಕನಸು ಇತ್ತ ಕೋಲ್ಕತಾ ಹಾಲಿ ಚಾಂಪಿಯನ್ ಆಗಿದ್ದು ಈ ಬಾರಿ ಜಯದ ಮೂಲಕವೇ ಟೂರ್ನಿ ಆರಂಭಿಸುವ ತುಡಿತವಿದೆ. ಸ್ಥಳೀಯ ಸ್ಟಾರ್‍ಗಳಾದ ಲಾಲ್ ಚಾವ್ಕಿಮಾ, ಅಗಸ್ಟಿನ್ ಫರ್ನಾಂಡಿಸ್, ಅಮರಿಂದರ್ ಸಿಂಗ್ ಹಾಗೂ ಕುಂಗ್ ಜಾಂಗ್ ಭುಟಿಯಾ ತಂಡದಲ್ಲಿದ್ದಾರೆ.

ಅಚ್ಚರಿಯೆಂದರೆ, ಕಳೆದ ವರ್ಷ ತಂಡವನ್ನು ಚಾಂಪಿಯನ್ ಪಟ್ಟದವರೆಗೆ ಯಶಸ್ವಿ ಯಾಗಿ ಮುನ್ನಡೆಸಿದ್ದ ನಾಯಕ ಗಾರ್ಸಿಯಾ ಸೇರಿದಂತೆ ಮಟೆವು, ಫಿಕ್ರು ಅವರಂಥ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಹಾಗಾಗಿ, ಕೋಲ್ಕತಾ ತಂಡ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದೂ ಒಂದು ಕುತೂಹಲದ ವಿಚಾರ.

SCROLL FOR NEXT