ಆಶ್ಗಬಟ್: ಫಿಫಾ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳುವ ಯತ್ನದಲ್ಲಿರುವ ಭಾರತೀಯ ಫುಟ್ಬಾಲ್ ತಂಡ ಮತ್ತೆ ಮುಗ್ಗರಿಸಿದೆ.
ಗುರುವಾರ ನಡೆದ ತುರ್ಕ್‍ಮೆನಿಸ್ತಾನ್ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ 1-2 ಗೋಲುಗಳ ಅಂತರದಲ್ಲಿ ಮಣಿದಿದೆ.
ಪಂದ್ಯದ 8ನೇ ನಿಮಿಷದಲ್ಲಿ ಆತಿಥೇಯರ ಪರ ಗುಬಾಂಚ್ ಅಬೈಲೊವ್ ಮೊದಲ ಗೋಲು ದಾಖಲಿಸಿದರೆ, 60ನೇ ನಿಮಿಷದಲ್ಲಿ ಅರ್ಸಲಾನ್‍ಮಿನಟ್ ಅಮಾ ನೊವ್ ನಿರ್ಣಾಯಕ 2ನೇ ಗೋಲು ಬಾರಿಸಿದರು. ಭಾರತದ ಪರ, ಲಾಲ್‍ಪೆಕ್ಲುವಾ ಅವರಿಂದ 28ನೇ ನಿಮಿಷದಲ್ಲಿ ಗೋಲು ಬಂದಿತ್ತು. ಈ ಫಲಿತಾಂಶ ಸಹಿತ, ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸತತ 3 ಸೋಲು ದಾಖಲಿಸಿರುವ ಡಿ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದ್ದು ಏಷ್ಯಾ ಕಪ್‍ಗೂ ಅರ್ಹತೆ ಗಳಿಸುವಲ್ಲಿ ವಿಫಲವಾಗಿದೆ.