ಭಾರತ ಹಾಕಿ ತಂಡ (ಸಂಗ್ರಹ ಚಿತ್ರ) 
ಕ್ರೀಡೆ

ಹಾಕಿ ಟೆಸ್ಟ್ ಸರಣಿ: ಅಂತಿಮ ಪಂದ್ಯ 1-1ರ ಡ್ರಾ, ಭಾರತಕ್ಕೆ 2-1ರಿಂದ ಟೂರ್ನಿ ವಶ

ಮಹತ್ವದ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿ ಹಾಗೂ ಮುಂದಿನ ವರ್ಷದ ರಿಯೋ ಒಲಿಂಪಿಕ್ಸ್ ತಯಾರಿಗಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಹಾಕಿ ತಂಡ ...

ಮಹತ್ವದ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿ ಹಾಗೂ ಮುಂದಿನ ವರ್ಷದ ರಿಯೋ ಒಲಿಂಪಿಕ್ಸ್ ತಯಾರಿಗಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಹಾಕಿ ತಂಡ ಉತ್ತಮ ಪ್ರದರ್ಶನ ದುವರಿಸಿ, ಸರಣಿ ಗೆದ್ದುಕೊಂಡಿದೆ. ಭಾನುವಾರ ನಡೆದ ನಾಲ್ಕನೇ ಹಾಗಬ ಅಂತಿಮ ಪಂದ್ಯದಲ್ಲಿ ಭಾರತ ತಂಡ 1-1 ಗೋಲುಗಳ ತರದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಡ್ರಾ ಸಾಧಿಸಿತು. ಆರಂಭಿಕ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಭಾರತ, ನಂತರದ ಎರಡೂ ಪಂದ್ಯಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿತ್ತು. ಅಂತಿಮ ಪಂದ್ಯದಲ್ಲಿ ಡ್ರಾ ಸಾಧಿಸಿದ ಭಾರತಸರಣಿ ವಶಪಡಿಸಿಕೊಂಡಿದೆ. ಭಾರತ ತಂಡದ ಪರ ಕರ್ನಾಟಕದ ಎಸ್.ವಿ ಸುನೀಲ್ (43ನೇ) ಹಾಗೂ ನ್ಯೂಜಿಲೆಂಡ್ ತಂಡದ ಪರ ನಿಕ್ ರೋಸ್ (41ನೇ) ಗೋಲು ದಾಖಲಿಸಿದರು.

ಪಂದ್ಯದ ಆರಂಭದಿಂದಲೇ ಭಾರತ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಪಂದ್ಯದ ಮೊದಲ ಕ್ವಾರ್ಟರ್‍ನಲ್ಲಿ ಪ್ರಾಬಲ್ಯ ಮೆರೆದರು. ಆರಂಭಿಕ ಹಂತದಲ್ಲೇ ಆತಿಥೇಯರ ರಕ್ಷಣಾತ್ಮಕ ಕೋಟೆಯನ್ನು ಪ್ರವೇಶಿಸಿದ ಸರ್ದಾರ್ ಸಿಂಗ್ ಪಡೆ 11ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಪಡೆಯಿತು. ಈ ವೇಳೆ ರೂಪಿಂದರ್ ಪಾಲ್ ಸಿಂಗ್ ಗುರಿ ತಪ್ಪಿದ ಪರಿಣಾಮ ಗೋಲು ದಾಖಲಾಗಲಿಲ್ಲ. ನಂತರ ನ್ಯೂಜಿಲೆಂಡ್ ತಂಡ ಪ್ರತಿರೋಧ ಒಡ್ಡಿದರೂ, ಎಲ್ಲಾ ಪ್ರಯತ್ನಗಳನ್ನೂ ಪಿ.ಆರ್ ಶ್ರೀಜೇಶ್ ವಿಫಲಗೊಳಿಸುವಲ್ಲಿ ಯಶಸ್ವಿಯಾದರು. ಎರಡು
ತಂಡಗಳ ಈ ಪೈಪೋಟಿಯ ಪರಿಣಾಮ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು 0-0 ಅಂತರ ಕಾಯ್ದುಕೊಂಡಿದ್ದವು.

ಪಂದ್ಯದ ದ್ವೀತಿಯಾರ್ದದಲ್ಲಿ ಉಭಯ ತಂಡಗಳು ತಮ್ಮ ತಂತ್ರಗಾರಿಕೆ ಬಳಸಿ ಪೈಪೋಟಿ ನಡೆಸಿದವು. ಸ್ಟೀವ್ ಎಡ್ವರ್ಡ್ಸ್‍ರಿಂದ ಪಾಸ್ ಪಡೆದ ನಿಕ್ ರೋಸ್ ಚೆಂಡನ್ನು ಗೋಲು ದಾಖಲಿಸಿದರು. ನಂತರ ಎರಡೇ ನಿಮಿಷದ ಅಂತರದಲ್ಲಿ ಭಾರತ ಪ್ರತ್ಯುತ್ತರ ನೀಡಿತು. ಪಂದ್ಯದ 43ನೇ ನಿಮಿಷದಲ್ಲಿ ಎಸ್.ವಿ.ಸುನೀಲ್ ಗೋಲು ದಾಖಲಿಸಿ ತಂಡ ಸಮಬಲ ಸಾಧಿಸುವಂತೆ ನೆರವಾದರು. ಯುರೋಪ್ ಪ್ರವಾಸದ ಸರಣಿ ಜಯದ ನಂತರ ಈ ಗೆಲವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT