ಸಾಂದರ್ಭಿಕ ಚಿತ್ರ 
ಕ್ರೀಡೆ

ಫಿಫಾ ಅರ್ಹತಾ ಸುತ್ತು: ಇಂದು ಒಮನ್ ಸವಾಲು

ಮುಂಬರಲಿರುವ 2018ರ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೋತು ತಲ್ಲಣಿಸಿರುವ ಭಾರತಕ್ಕೆ ಮಂಗಳವಾರ ಮತ್ತೊಂದು ಹಂತದ...

ಮಸ್ಕಟ್: ಮುಂಬರಲಿರುವ 2018ರ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೋತು ತಲ್ಲಣಿಸಿರುವ ಭಾರತಕ್ಕೆ ಮಂಗಳವಾರ ಮತ್ತೊಂದು ಹಂತದ ಸವಾಲು ಎದುರಾಗಿದ್ದು ಒಮನ್ ಜತೆಗೆ ಕಾದಾಡಲಿದೆ. ಅರ್ಹತಾ ಸುತ್ತಿನ `ಡಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ, ಈಗಾಗಲೇ ನಾಲ್ಕು ಪಂದ್ಯಗಳನ್ನು ಆಡಿದ್ದು ಒಂದರಲ್ಲಿಯೂ ಗೆಲುವು ಸಾಧಿಸಿಲ್ಲ.

ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇದೇ ಓಮನ್ ವಿರುದ್ಧ ಭಾರತ ದಿಟ್ಟ ಪೈಪೋಟಿ ನೀಡಿತ್ತಾದರೂ, 1-2 ಗೋಲುಗಳಿಂದ ಸೋಲನುಭವಿಸಿತ್ತು. ಬಳಿಕ ನಡೆದ ಗುವಾಮ್ ವಿರುದ್ಧ 2-1ರಿಂದ ಸೋತ ಭಾರತ, ಮತ್ತೆ ಬೆಂಗಳೂರಿನಲ್ಲಿ ನಡೆದ ಇರಾನ್ ವಿರುದ್ಧದ ಪಂದ್ಯದಲ್ಲಿ 0-3 ಗೋಲುಗಳಿಂದ ಜರ್ಜರಿತವಾಗಿತ್ತು. ಇದಾದ ಬಳಿಕ ತುಕ್ರ್ ಮೆನಿಸ್ತಾನ ವಿರುದ್ಧ ಭಾರತ 1-2 ಅಂತರದ ಸೋಲನುಭವಿಸಿತ್ತು. ಐಎಸ್‍ಎಲ್ ಹಿನ್ನೆಲೆಯಲ್ಲಿ ಪ್ರಮುಖ ಆಟಗಾರರ ಅಲಭ್ಯತೆಯೂ ಕಾಡಿದೆ. ಪಿಫಾ ರ್ಯಾಂಕಿಂಗ್‍ನಲ್ಲಿ 167ನೇ ಸ್ಥಾನದಲ್ಲಿರುವ ಸುನೀಲ್ ಛೆಟ್ರಿ ಪಡೆ, 102ನೇ ಶ್ರೇಯಾಂಕದಲ್ಲಿರುವ ಓಮನ್‍ಗೆ ಯಾವ ಪರಿಯಲ್ಲಿ ಪೈಪೋಟಿ ಒಡ್ಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT