ಕೊಹ್ಲಿಯೊಂದಿಗೆ ಪಾಕ್ ಆಟಗಾರರು 
ಕ್ರೀಡೆ

ಸದ್ಯಕ್ಕಿಲ್ಲ ಇಂಡೋ-ಪಾಕ್ ಕ್ರಿಕೆಟ್

ನೆನೆಗುದಿಗೆ ಬಿದ್ದಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯನ್ನು ಆರಂಭಿಸುವ ಮಹಾನ್ ಆಸೆಯೊಂದಿಗೆ ನವದೆಹಲಿಗೆ ಆಗಮಿಸಿದ್ದ...

ನವದೆಹಲಿ: ನೆನೆಗುದಿಗೆ ಬಿದ್ದಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯನ್ನು ಆರಂಭಿಸುವ ಮಹಾನ್ ಆಸೆಯೊಂದಿಗೆ ನವದೆಹಲಿಗೆ ಆಗಮಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಭ್ರಮನಿರಸಗೊಂಡಿದ್ದಾರೆ. 
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿ ಆರಂಭಿಸುವ ಬಗ್ಗೆ ಬಿಸಿಸಿಐ ತೋರಿದ ನಿರುತ್ಸಾಹದಿಂದ ತಮಗೆ ಆಶಾಭಂಗವಾಗಿದೆ ಎಂದು ಹೇಳಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. 
ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ``ಭಾರತಕ್ಕೆ ನಾನು ಮಾತುಕತೆಗಾಗಿ ಆಗಮಿಸಿ, ಸುಮಾರು 48 ಗಂಟೆಗಳು ಕಳೆದಿವೆ. ಆದರೆ, ಈವರೆಗೂ ಒಂದೇ ಒಂದು ಅಧಿಕೃತ ಸಭೆ ನಡೆದಿಲ್ಲ. ಮಂಗಳವಾರ ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಹಾಗೂ ಇತರ ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. 
ಅಲ್ಲಿ ನಾವೆಲ್ಲರೂ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಂಡೆವಷ್ಟೇ. ಸರಣಿ ಸಂಬಂಧ ರಾಜೀವ್ ಶುಕ್ಲಾ ಜತೆಗೆ ನಡೆಸಿದ ಮಾತುಕತೆಯೂ ಯಾವುದೇ ಫಲ ನೀಡಲಿಲ್ಲ. ಈ ಎಲ್ಲ ಬೆಳವಣಿಗೆಗಳು ಬೇಸರ ತರಿಸಿವೆ'' ಎಂದರು. 
ಟಿ20 ವಿಶ್ವಕಪ್ ಬಹಿಷ್ಕಾರವಿಲ್ಲ
ಭಾರತ ವಿರುದ್ಧದ ದ್ವಿಪಕ್ಷೀಯ ಸರಣಿ ನಡೆಯದಿದ್ದರೆ, ಪಾಕಿಸ್ತಾನ ತಂಡವು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ವದಂತಿಗಳಿಗೆ ಶಹರ್ಯಾರ್ ಇದೇ ಸಂದರ್ಭದಲ್ಲಿ ಖಾನ್ ತೆರೆ ಎಳೆದರು. 
ಈ ಬಗ್ಗೆ, ಪ್ರತಿಕ್ರಿಯಿಸಿರುವ ಅವರು, ``ದ್ವಿಪಕ್ಷೀಯ ಸರಣಿಯನ್ನೇ ನೆಪವಾಗಿಟ್ಟುಕೊಂಡು ಟಿ20 ವಿಶ್ವಕಪ್‍ನಿಂದ ದೂರ ಉಳಿಯುವ ಕುರಿತಂತೆ ಯಾವುದೇ ವಿಚಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿಲ್ಲ'' ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 8 ಮಂದಿ ಸಾವು; 105 ಭಾರತೀಯರು ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!