ಸಂಗ್ರಹ ಚಿತ್ರ 
ಕ್ರೀಡೆ

ಬಿಸಿಸಿಐ ಅಂಗಳಕ್ಕೆ ವಾಂಖೆಡೆ ವಿವಾದ

ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಐದನೇ ಏಕದಿನ ಪಂದ್ಯಕ್ಕೆ ಆತಿಥ್ಯ ಹೊತ್ತಿದ್ದ ಮುಂಬೈನ ವಾಂಖೆಡೆಪಿಚ್ ಕ್ಯುರೇಟರ್ ವಿರುದ್ಧ ಟೀಂ ಇಂಡಿಯಾ...

ಮುಂಬೈ: ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಐದನೇ ಏಕದಿನ ಪಂದ್ಯಕ್ಕೆ ಆತಿಥ್ಯ ಹೊತ್ತಿದ್ದ ಮುಂಬೈನ ವಾಂಖೆಡೆ ಪಿಚ್ ಕ್ಯುರೇಟರ್ ವಿರುದ್ಧ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಹರಿಹಾಯ್ದಿರುವ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಕೂಲಂಕಷ ಪರಿಶೀಲನೆಗೆ ಬಿಸಿಸಿಐ ಮುಂದಾಗಿದೆ.

ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, `ಪಂದ್ಯದ ನಗರದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಸಿಸಿಐ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪ್ರಕರಣ ಸೂಕ್ಷ್ಮವಾಗಿದ್ದು ಇದನ್ನು ಎಚ್ಚರಿಕೆಯಿಂದ ನಿಭಾಯಿಸಲಾಗುವುದು. ಕಳೆದ ವರ್ಷ, ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ತಂಡದ ಉಪನಾಯಕ ವಿರಾಟ್ ಕೊಹ್ಲಿ ಭಾರತದ ಪ್ರಮುಖ ದೈನಿಕವೊಂದರ ವರದಿಗಾರರ ಜತೆ ಜಗಳ ಮಾಡಿಕೊಂಡಿದ್ದ ಪ್ರಕರಣವನ್ನು ನಿಭಾಯಿಸಿದ ರೀತಿಯಲ್ಲೇ ವಾಂಖೆಡೆ ಪಿಚ್ ವಿವಾದವನ್ನೂ ಇತ್ಯರ್ಥಗೊಳಿಸಲಾಗುವುದು'' ಎಂದರು.

ಭಾನುವಾರ ನಡೆದಿದ್ದ ಈ ಐದನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 214 ರನ್‍ಗಳ ಹೀನಾಯ ಸೋಲು ಕಂಡಿದ್ದ ಭಾರತ ತಂಡ, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-3 ಅಂತರದಲ್ಲಿ ಪರಾಭವ ಹೊಂದಿತ್ತು. ಪಂದ್ಯ ಮುಗಿದ ಕೂಡಲೇ ಟೀಂ ಇಂಡಿಯಾ ವ್ಯವಸ್ಥಾಪಕ ಮಂಡಳಿಯಿಂದ ಪಿಚ್‍ನ ಬಗ್ಗೆ ಅಪಸ್ವರವೆದ್ದಿತ್ತು. ಅದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ರವಿಶಾಸ್ತ್ರಿ, ವಾಂಖೆಡೆ ಪಿಚ್ ಸಿದ್ಧಪಡಿಸಿದ್ದ ಕ್ಯುರೇಟರ್ ಸುಧೀರ್ ನಾಯಕ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. `ಮೊದಲು ಬ್ಯಾಟಿಂಗ್‍ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ, 438 ರನ್‍ಗಳ ಬೃಹತ್ ಮೊತ್ತ ಪೇರಿಸಲು ಕೆಟ್ಟ ಪಿಚ್ ಸಿದ್ಧಪಡಿಸಿದ್ದೇ ಕಾರಣ'' ಎಂದು ರವಿಶಾಸ್ತ್ರಿ ಸಿಡಿಮಿಡಿಗೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕ್ಯುರೇಟರ್ ನಾಯಕ್, `ನನಗೆ  ಪಿಚ್ ಸಿದ್ಧಪಡಿಸುವ ಬಗ್ಗೆ ಪಾಠ ಹೇಳಿಕೊಡುವ ಅಗತ್ಯವಿಲ್ಲ. ನಾನೂ ಸಹ ಟೀಂ ಇಂಡಿಯಾದ ಮಾಜಿ ಆಟಗಾರನಾಗಿದ್ದು, ಪಿಚ್ ಹೇಗೆ ಸಿದ್ಧಪಡಿಸಬೇಕೆಂಬುದು ಗೊತ್ತಿದೆ' ಎಂದು ಶಾಸ್ತ್ರಿಗೆ ಟಾಂಗ್ ನೀಡಿದ್ದರು. ಅಲ್ಲದೆ, ಶಾಸ್ತ್ರಿ ವಿರುದ್ಧ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)ಗೂ ದೂರು ನೀಡಿದ್ದರು.

ಹೊಸ ಐಪಿಎಲ್ ಫ್ರಾಂಚೈಸಿ ಬಗ್ಗೆ ಶೀಘ್ರ ಮಾಹಿತಿ ಮುಂದಿನ ಐಪಿಎಲ್‍ನಲ್ಲಿ ಯಾವ ಹೊಸ ತಂಡಗಳು ಸೇರ್ಪಡೆಗೊಳ್ಳಲಿವೆ ಎಂಬುದರ ಬಗ್ಗೆ ನಿಖರ ಮಾಹಿತಿ, ನ. 9ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯ ನಂತರ ಹೊರಬೀಳಲಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಹೊಸ ತಂಡಗಳಿಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಇದೀಗ ಎರಡು ವರ್ಷಗಳ ಅವಧಿಗೆ ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್‍ಆರ್) ತಂಡಗಳ ಆಟಗಾರರಲ್ಲಿ ಎಷ್ಟು ಮಂದಿಗೆ ಹೊಸ ಫ್ರಾಂಚೈಸಿಗಳಲ್ಲಿ ಅವಕಾಶ ಸಿಗಲಿದೆ ಎನ್ನುವುದು ಇನ್ನೂ ನಿಶ್ಚಯವಾಗಿಲ್ಲ. ಈ ವಿಚಾರವೂ ಸಹ, ವಾರ್ಷಿಕ ಮಹಾಸಭೆಯಲ್ಲಿ ಚರ್ಚೆಗೆ ಬರಲಿದೆ. ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು. ಇದಲ್ಲದೆ, ಬಿಸಿಸಿಐನೊಳಗೆ ವಿವಾದ ಸೃಷ್ಟಿಸಿರುವ `ಸ್ವಹಿತಾಸಕ್ತಿ ಸಂಘರ್ಷ'ವನ್ನು ಮಹಾಸಭೆಯಲ್ಲಿ ಚರ್ಚಿಸಿ, ಸೂಕ್ತ ನಿವಾರಣಾ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು ಎಂದೂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಚರ್ಚೆಯ ಬಗ್ಗೆ ಎಲ್ಲಾ ಸದಸ್ಯರಿಗೂ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT