ಬ್ಯಾಂಕಾಕ್: ಎರಡನೇ ಶ್ರೇಯಾಂಕಿತ ಆಟಗಾರ ಭಾರತದ ಸೋಮ್ದೇವ್ ದೇವ್‍ವರ್ಮನ್ ಎಟಿಪಿ ಬ್ಯಾಂಕಾಕ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಿಂದ ಅಂತಿಮ ಎಂಟರ ಘಟ್ಟ ತಲುಪಿದ್ದಾರೆ.
ಆದರೆ ಎನ್. ಶ್ರೀರಾಮ್ ಬಾಲಾಜಿ ಮೂರು ಸೆಟ್‍ಗಳ ಸೆಣಸಾಟದಲ್ಲಿ ಸೋಲಿನೊಂದಿಗೆ ಸಿಂಗಲ್ಸ್‍ನಿಂದ ಹೊರಬಿದ್ದಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅರ್ಹತಾ ಆಟಗಾರ ಆಂಡ್ರ್ಯೂ ವ್ಹಿಟ್ಟಿಂಗ್‍ಟನ್ ವಿರುದ್ಧದ ಸೆಣಸಾಟದಲ್ಲಿ ಆಸೀಸ್ ಆಟಗಾರ ಬಿಸಿಲ ತಾಪದಿಂದ ಬಳಲಿ ಆಟದ ಮಧ್ಯದಲ್ಲಿಯೇ ಹಿಮ್ಮೆಟಿದರು. ಈ ಸಂದರ್ಭದಲ್ಲಿ ಸೋಮ್ 75, 42ರ ಮುನ್ನಡೆ ಸಾಧಿಸಿದ್ದರು. ಇನ್ನು ಮತ್ತೊಂದು ಪಂದ್ಯದಲ್ಲಿ ಬಾಲಾಜಿ 76 (4), 26, 36 ಸೆಟ್ ಗಳಿಂದ ಬೆಂಜಮಿನ್ ಮಿಚೆಲ್ ವಿರುದ್ಧ ಸೋತರು.