ಕ್ರೀಡೆ

ಜಪಾನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್, ಕ್ವಾರ್ಟರ್ ನಲ್ಲಿ ಮುಗ್ಗರಿಸಿದ ಪರುಪಳ್ಳಿ

Shilpa D

ಪ್ರತಿಷ್ಟಿತ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಹೋರಾಟವನ್ನು ಏಕಾಂಗಿಯಾಗಿ ಮುಂದುವರಿಸಿದ್ದ ಪರುಪಳ್ಳಿ ಕಶ್ಯಪ್, ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸೋಲನುಭವಿಸುವುದರೊಂದಿಗೆ ಭಾರತದ ಸವಾಲಿಗೂ ತೆರೆ ಎಳೆದರು.

ಶುಕ್ರವಾರ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕಶ್ಯಪ್ ತಮ್ಮ ಪ್ರತಿಸ್ಪರ್ದಿ ಆರನೇ ಶ್ರೇಯಾಂಕಿತ ಚೈನೀಸ್ ತೈಪೆಯ ಚೌಥೈನ್  ವಿರುದ್ಧ ಎರಡು ನೇರ ಗೇಮ್ ಗಳ ಆಟದಲ್ಲಿ  ಪರಾಭವಗೊಂಡರು. 42 ನಿಮಿಷಗಳ ಕಾಲ ನಡೆದ ಕಾಳಗದಲ್ಲಿ14-21, 18-21 ರ ಅಂತರದಿಂದ ಕಶ್ಯಪ್ ಕಳೆಗುಂದಿದರು. ಗುರುವಾರ ನಡೆದಿದ್ದ ಫ್ರೀಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಭಾರತದ ಮೂವರು ಪ್ರಮುಖ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ , ಕೆ, ಶ್ರೀಕಾಂತ್  ಮತ್ತು ಎಚ್. ಎಸ್  ಪ್ರಣಯ್ ಸೋಲನುಭವಿಸಿದರು.  ಹಾಗಾಗಿ ಕಶ್ಯಪ್ ಏಕಾಂಗಿಯಾಗಿ ಕ್ವಾರ್ಟರ್ ಫೈನಲ್  ಪ್ರವೇಶಿಸಿ ಭಾರತದ ಹೋರಾಟವನ್ನು ಜೀವಂತವಾಗಿರಿಸಿದರು.  ಆದರೆ ಶುಕ್ರವಾರ ಇವರೂ ಸಹ ಸೋಲನುಭವಿಸಿದ್ದು ಭಾರತದ ಅಭಿಯಾನಕ್ಕೆ ತೆರೆ ಬಿದ್ದಂತಾಯಿತು.

ವಿಶ್ವದ 8ನೇ ರ್ಯಾಂಕಿಂಗ್ ಕಶ್ಯಪ್ ಚೈನೀಸ್ ತೈಪೇ ಆಟಗಾರನ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಥೈನ, ಚೆನ್, ಮೊದಲ ಗೇಮ್ ನಲ್ಲಿ ಸತತ ಐದು ಅಂಕಗಳನ್ನು ಸಂಪಾದಿಸಿದರು.  ಈ ಮೂಲಕ ಕಶ್ಯಪ್ ವಿರುದ್ಧ ಸಂಪೂರ್ಣ  ನಿಯಂತ್ರಣ ಸಾಧಿಸಿದರು.  ಎರಡನೇ ಗೇಮ್ ನಲ್ಲಿ  ಕಶ್ಯಪ್ ಉತ್ತಮ ಆರಂಭ ಪಡೆದರಾದರೂ ಸ್ಥಿರ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ ಮತ್ತೆ ಹಿನ್ನಡೆ ಅನುಭವಿಸಿದರು.

SCROLL FOR NEXT