ನವದೆಹಲಿ: ಟೀಂ ಇಂಡಿಯಾ ನಿರ್ದೇಶಕ ಸ್ಥಾನದಲ್ಲಿ ರುವ ಮಾಜಿ ನಾಯಕ ರವಿ ಶಾಸ್ತ್ರಿ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ವರೆಗೂ ಈ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.
ಬಿಸಿಸಿಐನ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಮಂಡಳಿ ರವಿಶಾಸ್ತ್ರಿ ಅವರನ್ನು ಮುಂದಿನ ವರ್ಷ ನಡೆಯಲಿರುವ ಬಹು ನಿರೀಕ್ಷಿತ ಟೂರ್ನಿವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಟೀಂ ಇಂಡಿಯಾದ ನಿರ್ದೇಶಕರಾಗಿ ಆಯ್ಕೆಯಾದ ರವಿಶಾಸ್ತ್ರಿ ಅವರನ್ನು ಈ ಜವಾಬ್ದಾರಿ ಯಲ್ಲಿ ಮುಂದಿನ 7 ತಿಂಗಳ ಅವಧಿವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ. ಆರನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯನ್ನು ಮಾರ್ಚ್ 11ರಿಂದ ಏಪ್ರಿಲ್ 3ರವರೆಗೆ ಭಾರತದಲ್ಲೇ ನಡೆಯಲಿದೆ.