ಕ್ರೀಡೆ

ಮಾಧ್ಯಮ ಭೀತಿಯಲ್ಲಿ ಸೆಪ್ ಬ್ಲಾಟರ್

Srinivasamurthy VN

ಜ್ಯೂರಿಚ್: ಅಮೆರಿಕ ಹಾಗೂ ಸ್ವಿಜರ್ಲೆಂಡ್ ಸರ್ಕಾರದ ವತಿಯಿಂದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಪಿಫಾ) ಹಗರಣಗಳ ತನಿಖೆ ಆರಂಭವಾದ ಮೇಲೆ, ಪಿಫಾ ನಿರ್ಗಮಿತ ಅಧ್ಯಕ್ಷ ಸೆಪ್ ಬ್ಲಾಟರ್ ಇದೇ ಮೊದಲ  ಬಾರಿಗೆ ಮಾಧ್ಯಮಗಳ ಮುಂದೆ ಮುಖಾಮುಖಿಯಾಗಲಿದ್ದಾರೆ.

ಪಿಫಾದ ಎರಡು ದಿನಗಳ ಕಾರ್ಯಕಾರಿಣಿ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಬ್ಲಾಟರ್ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಮಯಕ್ಕಾಗಿ ಹಲವಾರು ತಿಂಗಳುಗಳಿಂದ ಮಾಧ್ಯಮಗಳೂ ಕಾಯುತ್ತಿದ್ದು, ಮೊಗೆದಷ್ಟೂ ಮುಗಿಯದಂತಿರುವ ಹಗರಣಗಳ ಬಗ್ಗೆ ಬ್ಲಾಟರ್ ಅವನ್ನು ಪ್ರಶ್ನಿಸಲು ತುದಿಗಾಲಲ್ಲಿ ನಿಂತಿರುವುದು ಅವರನ್ನು ಕಂಗೆಡಿಸಿದೆ.

SCROLL FOR NEXT