ಬೆಂಗಳೂರು: ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ಐದು ವಿಕೆಟ್ ಗಳನ್ನು ಎಗರಿಸಿ ಭರವಸೆ ಮೂಡಿಸಿರುವ ವೇಗಿ ಪ್ರಸಿದ್ಧ್ ಎಂ ಕೃಷ್ಣ ಹಾಗೂ ಐಪಿಎಲ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಸ್ಪಿನ್ನರ್ ಜೆ.ಸುಚಿತ್ ಕರ್ನಾಟಕ ರಣಜಿ ತಂಡಕ್ಕೆ ಲಗ್ಗೆ ಹಾಕಿದ್ದಾರೆ.
ಕರ್ನಾಟಕ ತಂಡದ ಆಯ್ಕೆ ಸಮಿತಿ ಅಕ್ಟೋಬರ್ 1 ರಿಂದ 4 ರವರೆಗೆ ರಣಜಿ ಟ್ರೋಫಿ ಎ ಗುಂಪಿನಲ್ಲಿ ಅಸ್ಸಾಂ ವಿರುದ್ಧ ಗುವಾಹಟಿಯಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಹದಿನೈದು ಮಂದಿ ಆಟಗಾರರನ್ನು ಅಂತಿಮಗೊಳಿಸಿದ್ದು, ಈ ಇಬ್ಬರು ಯುವ ಆಟಗಾರರನ್ನೂ ಸೇರ್ಪಡೆಗೊಳಿಸಿದೆ. ಇವರೊಂದಿಗೆ ಶಿಶಿರ್ ಭಾವಾನೆ ಹಾಗೂ ಮಯಾಂಕ್ ಅಗರವಾಲ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದು, ತಂಡದ ಸಾರಥ್ಯವನ್ನು ಆರ್. ವಿನಯ್ ಕುಮಾರ್ ಹೊತ್ತುಕೊಂಡಿದ್ದರೆ, ಬಾಂಗ್ಲಾದೇಶ ಎ ತಂಡದ ವಿರುದ್ಧ ಯುವ ತಂಡವನ್ನು ಯಶಸ್ವಿಯಾಗಿ ಗೆಲುವಿನತ್ತ ಮುನ್ನಡೆಸಿದ ಸಿಎಂ ಗೌತಮ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ತಂಡದ ವಿವರ: ಆರ್ ವಿನಯ್ ಕುಮಾರ್(ನಾಯಕ), ಸಿ.ಎಂ ಗೌತಮ್(ಉಪನಾಯಕ), ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕರುಣ್ ನಾಯರ್, ಆರ್.ಸಮರ್ಥ, ಅಭಿಷೇಕ್ ರೆಡ್ಡಿ, ಶ್ರೇಯಸ್ ಗೋಪಾಲ್, ಉದಿತ್ ಬಿ ಪಟೇಲ್, ಅಭಿಮನ್ಯು ಮಿಥುನ್, ಹೆಚ್.ಎಸ ಶರತ್, ಜೆ.ಸುಚಿತ್, ಶಿಶಿರ್ ಭಾವಾನೆ, ಮಯಾಂಕ್ ಅಗರವಾಲ್ ಮತ್ತು ಪ್ರಸಿದ್ಧ್ ಎಂ ಕೃಷ್ಣ