ಗುರ್ ಪ್ರೀತ್ ಸಿಂಗ್ 
ಕ್ರೀಡೆ

ಭಾರತದ ಗುರ್ ಪ್ರೀತ್ ಸಿಂಗ್ ಬೆಳ್ಳಿ, ಜಿತುಗೆ ಕಂಚು

8ನೇ ಏಷ್ಯನ್ ಏರ್‍ಗನ್ ಶೂಟಿಂಗ್ ಚಾಂಪಿಯನ್‍ಶಿಪ್‍ ಭರವಸೆಯ ಶೂಟರ್‍ಗಳಾದ ಗುರ್ ಪ್ರೀತ್ ಸಿಂಗ್ ಮತ್ತು ಜಿತು ರೈ ತಮ್ಮ ಅತ್ಯದ್ಭುತ ಪ್ರದರ್ಶನವನ್ನು ...

8ನೇ ಏಷ್ಯನ್ ಏರ್‍ಗನ್ ಶೂಟಿಂಗ್ ಚಾಂಪಿಯನ್‍ಶಿಪ್‍ ಭರವಸೆಯ ಶೂಟರ್‍ಗಳಾದ ಗುರ್ ಪ್ರೀತ್  ಸಿಂಗ್ ಮತ್ತು ಜಿತು ರೈ ತಮ್ಮ ಅತ್ಯದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಏಷ್ಯನ್ ಏರ್‍ಗನ್ ಚಾಂಪಿಯನ್‍ಶಿಪ್‍ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಮಂಗಳವಾರ ನಡೆದ 10 ಮೀ. ಏರ್ ಪಿಸ್ತೂಲ್ ಫೈನಲ್ ಸ್ಪರ್ಧೆಯಲ್ಲಿ ಗುರ್‍ಪ್ರೀತ್ ಸಿಂಗ್ 197 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಇನ್ನು ಜಿತು ರೈ 177.6 ಅಂಕಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದರು. ಒಂದು ಹಂತದಲ್ಲಿ ಗುರ್ ಪ್ರೀತ್ ಸಿಂಗ್ 5ನೇ ಸ್ಥಾನಕ್ಕೆ ಕುಸಿದಿದ್ದರು ನಂತರ ತರಿಕೆಯ ಆಟ ಪ್ರದರ್ಶಿಸಿ ಉತ್ತಮ ರೀತಿಯಲ್ಲಿ ಹೋರಾಟ ನಡೆಸಿದರು.

 28 ವರ್ಷದ ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ವಿಜೇತ ಗುರ್‍ಪ್ರೀತ್ ಸಿಂಗ್, ಸಾಕಷ್ಟು 9ರಪರಿದಿಯಲ್ಲಿ ಗುರಿಯಿಟ್ಟರು. ಇನ್ನು ಓಂಕಾರ್ ಸಿಂಗ್ ಇರಾನ್‍ನ ಮೊಹಮದ್ ಅಹ್ಮದಿ ಅವರ ವಿರುದ್ಧ ಪರಾಭವಗೊಂಡು ಅಂತಿಮ ಸುತ್ತಿನಲ್ಲಿ ಹೊರಬಿದ್ದರು. ಆ ಮೂಲಕ ಫೈನಲ್‍ನಲ್ಲಿ ಹೊರ ಬಿದ್ದ ಮೊದಲ ಭಾರತೀಯ ಶೂಟರ್ ಆದರು. ಮಂಗಳವಾರವೂ ಪದಕ ಲಭಿಸಿರುವುದರಿಂದ ಭಾರತ ಸತತ ಮೂರನೇ ದಿನವು ಪದಕ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!