ಹರಾರೆ: ಜಿಂಬಾಬ್ವೆ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಪಾಕಿಸ್ತಾನ 15 ರನ್ ಜಯ ದಾಖಲಿಸುವ ಮೂಲಕ, ಎರಡು ಪಂದ್ಯಗಳ ಸರಣಿಯನ್ನು 2-0 ಮೂಲಕ ಕೈವಶ ಮಾಡಿಕೊಂಡಿತು.
ಇಲ್ಲಿನ ಹರಾರೆ ಸ್ಪೋರ್ಟಿಂಗ್ ಕ್ಲಬ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಉಮರ್ ಅಕ್ಮಲ್ ಅವರ ಅಜೇಯ 38 ರನ್ ಹಾಗೂ ಸೊಹೈಬ್ ಮಕ್ಸೂದ್ ಅವರ 26 ರನ್‍ಗಳ ಸಹಾಯದಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ, 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 121 ರನ್ ಮಾತ್ರ ಗಳಿಸಲು ಶಕ್ತವಾಯಿತು. ಸೀನ್ ವಿಲಿಯಮ್ಸ್ (ಅಜೇಯ 40) ಹಾಗೂ ಸಿಕಂದರ್ ರಾಜಾ (36 ರನ್) ಅವರಿಬ್ಬರು 5ನೇ ವಿಕೆಟ್‍ಗೆ ಸೇರಿಸಿದ 60 ರನ್ ಜೊತೆಯಾಟ ತಂಡಕ್ಕೆ ಗೆಲವು ತರಲಿಲ್ಲ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 20 ಓವರ್‍ಗಳಲ್ಲಿ 136ಕ್ಕೆ 6 (ಉಮರ್ ಅಕ್ಮಲ್ 38, ಸೊಹೈಬ್ ಮಕ್ಸೂದ್ 26; ಜಾಂಗ್ವೆ 24ಕ್ಕೆ 2, ಪನ್ಯಂಗಾರ 27ಕ್ಕೆ 2; ಜಿಂಬಾಬ್ವೆ 20 ಓವರ್‍ಗಳಲ್ಲಿ 121ಕ್ಕೆ 7 (ಸೀನ್ ವಿಲಿಯಮ್ಸ್ ಅಜೇಯ 40, ಸಿಕಂದರ್ ರಾಜಾ 36; ಮಹಮ್ಮದ್ ಇರ್ಪಾನ್ 25ಕ್ಕೆ 2, ಇಮ್ರಾನ್ 35ಕ್ಕೆ 2)