ವಿಶ್ವ ದಾಖಲೆ ಸರಿಗಟ್ಟಿದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ 
ಕ್ರೀಡೆ

ವಿಶ್ವ ದಾಖಲೆ ಸರಿಗಟ್ಟಿದ ಬಿಲ್ಲುಗಾರ್ತಿ ದೀಪಿಕಾ

ಮಹಿಳಾ ಆರ್ಚರಿ ವಿಶ್ವ ಕಪ್ ಪಂದ್ಯದಲ್ಲಿ ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಶಾಂಘೈ: ಮಹಿಳಾ ಆರ್ಚರಿ ವಿಶ್ವ ಕಪ್ ಪಂದ್ಯದಲ್ಲಿ ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಒಲಂಪಿಕ್ ಮತ್ತು ವಿಶ್ವ ಚಾಂಪಿಯನ್ ದಕ್ಷಿಣ ಕೊರಿಯಾದ ಕಿ ಬೊ-ಬೆ ಕಳೆದ ವರ್ಷ ಜುಲೈನಲ್ಲಿ ಮಾಡಿದ್ದ ದಾಖಲೆಯನ್ನು ದೀಪಿಕಾ ಸರಿಗಟ್ಟಿದ್ದಾರೆ. ಗರಿಷ್ಠ ೭೨೦ ಅಂಕಗಳಲ್ಲಿ ೨೧ ವರ್ಷದ ಬಿಲ್ವಿದ್ಯಾ ಪಟು ದೀಪಿಕಾ ೬೮೬ ಅಂಕ ಗಳಿಸಿ ದಾಖಲೆ ಸರಿಗಟ್ಟಿದ್ದಾರೆ.

ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದ ದೀಪಿಕಾ, ೨೦೧೧, ೨೦೧೨ ಮತ್ತು ೨೦೧೩ರ ವಿಶ್ವಕಪ್ ಆರ್ಚರಿಯಲ್ಲಿ ಬೆಳ್ಳಿ ಪದಕ ಗಳಿಸಿದ್ದರು.

ಕಳೆದ ವರ್ಷ ಕೋಪನ್ ಹೇಗನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ತೋರಿದ ಪ್ರದರ್ಶನಕ್ಕೆ ದೀಪಿಕಾ ಈಗಾಗಲೇ ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ.

"ಮಾರ್ಚ್ ೨೦೧೬ ರಲ್ಲಿ ಜೆಮ್ ಶೆಡ್ ಪುರ ಮತ್ತು ದೆಹಲಿಯಲ್ಲಿ ಒಲಂಪಿಕ್ಸ್ ಆಯ್ಕೆಗಾಗಿ ನಡೆಸಿದ ಪರೀಕ್ಷೆಗಳಲ್ಲಿ ದೀಪಿಕಾ ೬೯೦/೭೨೦ ಅಂಕಗಳನ್ನು ಪಡೆದಿದ್ದರು" ಎಂದು ಬಾರತೀಯ ಆರ್ಚರಿ ಸಂಘ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

"ಆರ್ಚರಿ ಪಂದ್ಯಗಳಿಗಾಗಿ ಭಾರತದಿಂದ ರಿಯೋ ಒಲಂಪಿಕ್ ಪಂದ್ಯಗಳಿಗೆ ಆಯ್ಕೆಯಾಗಿರುವ ನಾಲ್ವರಲ್ಲಿ ದೀಪಿಕಾ ಕೂಡ ಒಬ್ಬರು. ಈಗ ವಿಶ್ವಕಪ್ ನಲ್ಲಿ ಅವರು ತೋರಿರುವ ಪ್ರದರ್ಶನ ಮುಂದಿನ ಕ್ರೀಡೆಗಳಿಗೆ ಅವರ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ" ಎಂದು ಕೂಡ ಬಾರತೀಯ ಆರ್ಚರಿ ಸಂಘ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಎಲ್ಲರ ಹುಬ್ಬೇರಿಸಿದ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT