ಕ್ರೀಡೆ

ಕಂಚು ಗೆದ್ದ ಸಾಕ್ಷಿಗೆ ಹರಿಯಾಣ ಸರ್ಕಾರದಿಂದ ಸರ್ಕಾರಿ ನೌಕರಿ, ರು.2.5 ಕೋಟಿ ಬಹುಮಾನ ಘೋಷಣೆ

Manjula VN

ನವದೆಹಲಿ: ರಿಯೋ ಒಲಿಂಪಿಕ್ಸ್ 2016ರಲ್ಲಿ ಕಂಚು ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೆ ಬಹುಮಾನವಾಗಿ ರು.2.5  ಕೋಟಿ ನಗದು ಹಾಗೂ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಹರಿಯಾಣ ಸರ್ಕಾರ ಗುರುವಾರ ಘೋಷಣೆ ಮಾಡಿದೆ.

ಈ ಕುರಿತಂತೆ ಮಾತನಾಡಿರುವ ಹರಿಯಾಣ ಹಣಕಾಸು ಸಚಿವ ಕ್ಯಾಪ್ಟೆನ್ ಅಭಿಮನ್ಯು ಸಿಂಗ್ ಅವರು, ರಕ್ಷಾಬಂಧನ ದಿನದಂದು ಸಾಕ್ಷಿ ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಗೆಲ್ಲುವ ಮೂಲಕ ದೇಶಕ್ಕೆ ಅಷ್ಟೆ ಅಲ್ಲದೆ ಹರಿಯಾಣ ರಾಜ್ಯಕ್ಕೂ ಹೆಮ್ಮೆಯ ಗರಿಯನ್ನು ತಂದುಕೊಟ್ಟಿದ್ದಾರೆ. ಸಾಕ್ಷಿ ಮಲಿಕ್ ಗೆ ಬಹುಮಾನವಾಗಿ ಹರಿಯಾಣ ಸರ್ಕಾರ ರು.2.5  ಕೋಟಿ ನಗದು ಬಹುಮಾನ ಹಾಗೂ 2015ರ ಕ್ರೀಡಾ ನೀತಿಯನ್ವಯ ಸರ್ಕಾರಿ ಉದ್ಯೋಗವನ್ನು ನೀಡಲಿದೆ ಎಂದು ಹೇಳಿದ್ದಾರೆ.

ರಿಯೋ ಒಲಿಂಪಿಕ್ಸ್ ಮುಕ್ತಾಯಗೊಂಡು ಸಾಕ್ಷಿ ತವರಿಗೆ ಬಂದ ನಂತರ ಬಹುಮಾನವನ್ನು ವಿತರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದಷ್ಟೇ ಹರಿಯಾಣ ಸರ್ಕಾರ ರಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಅಥ್ಲೀಟ್ಸ್ ಗಳಿಗೆ ರು.6 ಕೋಟಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.

SCROLL FOR NEXT