ಹೈದರಾಬಾದ್: ರಿಯೋ ಒಲಿಂಪಿಕ್ಸ್ ನ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನ ಫೈನಲ್ ನಲ್ಲಿ ಪಿವಿ ಸಿಂಧು ಸ್ವರ್ಣ ಗೆದ್ದರೆ ಬಿಎಂಡಬ್ಲ್ಯೂ ಕಾರು ನೀಡುವ ಬಂಪರ್ ಆಫರ್ ಅನ್ನು ಉದ್ಯಮಿಯೊಬ್ಬರು ಪ್ರಕಟಿಸಿದ್ದಾರೆ.
ಮಾಜಿ ಕ್ರಿಕೆಟಿಗ, ಉದ್ಯಮಿ ಹಾಗೂ ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ವಿ ಚಾಮುಂಡೇಶ್ವರಿನಾಥ್ ಅವರು ಈ ಬಂಪರ್ ಆಫರ್ ಪ್ರಕಟಿಸಿದ್ದು, ಸಿಂಧು ಸ್ವರ್ಣ ಗೆದ್ದರೆ ಹೈದರಾಬಾದ್ ನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಂದ ಕಾರು ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಿಂದ ಯಾವೊಬ್ಬ ಅಥ್ಲೇಟಿಕ್ ಆದರೂ ಪದಕ ಗೆದ್ದರೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡುವುದಾಗಿ ಪ್ರಕಟಿಸಿದ್ದೇ ಅಂತೆ ಸಿಂಧು ಅವರು ಫೈನಲ್ ತಲುಪಿದ್ದು ಅವರಿಗೆ ಕಾರು ಬಳವಳಿಯಾಗಿ ನೀಡುವುದಾಗಿ ಹೇಳಿದ್ದಾರೆ.