ಕ್ರೀಡೆ

ದೀಪಾ ಕರ್ಮಾಕರ್ ಭಾರತದ ಜಿಮ್ನಾಸ್ಟಿಕ್ಸ್ ರಾಯಭಾರಿ?

Vishwanath S
ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಜಿಮ್ನಾಸ್ಟ್ ನಲ್ಲಿ ಮಿಂಚಿದ್ದ ದೀಪಾ ಕರ್ಮಾಕರ್ ರನ್ನು ಭಾರತದ ಜಿಮ್ನಾಸ್ಟಿಕ್ಸ್ ರಾಯಭಾರಿಯನ್ನಾಗಿ ಆಯ್ಕೆಗೊಳಿಸಲು ಶಿಫಾರಸ್ಸು ಮಾಡಲಾಗಿದೆ. 
ಮಾಜಿ ಫುಟ್ಬಾಲ್ ಆಟಗಾರ ಹಾಗೂ ಲೋಕಸಭಾ ಸಂಸದ ಪ್ರಸೂನ್ ಬ್ಯಾನರ್ಜಿ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. 
ರಿಯೋ ಕೂಟದಲ್ಲಿ ದೀಪಾ ಕರ್ಮಾಕರ್ ಮಹಿಳಾ ವಾಲ್ಟ್ ವಿಭಾಗದಲ್ಲಿ ಐತಿಹಾಸಿಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟು ಕೂದಲೆಳೆಯ ಅಂತರದಿಂದ ಕಂಚಿನ ಪದಕ ವಂಚಿತರಾಗಿದ್ದರು. 
2014ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವುದು ತ್ರಿಪುರ ಜಿಮ್ನಾಸ್ಟ್ನ ಶ್ರೇಷ್ಠ ಸಾಧನೆಯಾಗಿದೆ. 
SCROLL FOR NEXT