ಕ್ರೀಡೆ

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಮಾಳವಿಕ, ದಾಮಿನಿಗೆ ಸ್ವರ್ಣ ಪದಕ

Vishwanath S

ಗುವಾಹಟಿ: ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಕರ್ನಾಟಕದ ಪ್ರತಿಭಾನ್ವಿತ ಈಜುಗಾರ್ತಿಯರಾದ ವಿ. ಮಾಳವಿಕಾ ಮತ್ತು ದಾಮಿನಿ ಗೌಡ ಸ್ವರ್ಣ ಪದಕ ಪಡೆದಿದ್ದಾರೆ.

ಇನ್ನು ಪುರುಷರ 4/200 ಮೀಟರ್ ಫ್ರೀಸ್ಟೈಲ್ ನಲ್ಲಿ ಸೌರಭ್ ಸಂಗ್ವೇಕಾರ, ರಾಜ್ ಭನ್ವಾಡಿಯಾ, ನೀಲ್ ಕಾಂಟ್ರಾಕ್ಟರ್ ಮತ್ತು ಸಾಜನ್ ಪ್ರಕಾಶ್ ಚಿನ್ನ ಗೆದ್ದಿದ್ದಾರೆ.

ಕ್ರೀಡಾಕೂಟದಲ್ಲಿ ನಾಲ್ಕನೇ ದಿನ ಭಾರತ 76 ಚಿನ್ನ, 36 ಬೆಳ್ಳಿ, ಹಾಗೂ 10 ಕಂಚಿನ ಪದಕಗಳೊಂದಿಗೆ ಒಟ್ಟು 122 ಪದಕಗಳನ್ನು ಜಯಿಸಿ ಪದಕ ಬೇಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು 17 ಚಿನ್ನ ಗೆದ್ದ ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ.

SCROLL FOR NEXT