ಲಂಡನ್: ಪುಟ್ಬಾಲ್, ಹಾಕಿ ಕ್ರೀಡೆಗಳಲ್ಲಿ ಅಸಭ್ಯ ವರ್ತನೆ ತೋರಿದ ಆಟಗಾರರಿಗೆ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರ ಕಳಿಸುವ ನಿಯಮವನ್ನು ಇದೀಗ ಕ್ರಿಕೆಟ್ ನಲ್ಲೂ ಬಳಸಲಾಗುತ್ತದೆ.
ಮೆರಿಲ್ ಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಕ್ರಿಕೆಟ್ ನಲ್ಲಿ ಅಸಭ್ಯ ವರ್ತನೆಯನ್ನು ತಡೆಗಟ್ಟಲು ಇಂಥದ್ದೊಂದು ಕ್ರಮಕೈಗೊಳ್ಳಲು ಮುಂದಾಗಿದೆ.
ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ಆಟಗಾರರ ನಡುವಿನ ಜಗಳದಿಂದಾಗಿ ಒಟ್ಟು 5 ಪಂದ್ಯಗಳು ರದ್ದುಗೊಂಡಿದ್ದವು. ಹೀಗಾಗಿ ಕ್ರಿಕೆಟ್ ನಿಯಮಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಯಾದ ಎಂಸಿಸಿ ಅಂಪೈರ್ ಸಂಸ್ಥೆಗಳ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದೆ.