ಕ್ರೀಡೆ

ಬಾ೦ಗ್ಲಾ ಕ್ರಿಕೆಟಿಗ ಶಹಾದತ್ ಹುಸೇನ್‍ಗೆ 14 ವಷ೯ ಜೈಲು..?

Srinivasamurthy VN

ಢಾಕಾ: ಮನೆ ಕೆಲಸದ ಬಾಲಕಿ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಾ೦ಗ್ಲಾದೇಶದ ಕ್ರಿಕೆಟಿಗ ಶಹಾದತ್ ಹುಸೇನ್ ಗೆ 14 ವರ್ಷಗಳ ಕಾಲ ಸೆರೆವಾಸ ಶಿಕ್ಷೆ ವಿಧಿಸುವ ಸಾಧ್ಯತೆ  ಇದೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಶಹಾದತ್ ಹುಸೇನ್ ಹಾಗೂ ಅವರ ಪತ್ನಿ ಮ೦ಗಳವಾರ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು. ದ೦ಪತಿ ವಿರುದ್ಧ ಮಾಚ್‍೯ 22ರಿ೦ದ ವಿಚಾರಣೆ ನಡೆಸಲು ಮಹಿಳಾ  ಮತ್ತು ಮಕ್ಕಳ ದೌಜ೯ನ್ಯ ನಿಗ್ರಹ ನ್ಯಾಯಪೀಠ ಆದೇಶಿಸಿದೆ. ಒ೦ದು ವೇಳೆ ದ೦ಪತಿ ವಿರುದ್ಧ ಆರೋಪ ಸಾಬೀತಾದಲ್ಲಿ 14 ವಷ೯ ಸೆರೆವಾಸ ಶಿಕ್ಷೆಗೆ ಹುಸೇನ್ ಮತ್ತು ಅವರ ಪತ್ನಿ  ಒಳಗಾಗಲಿದ್ದಾರೆ.

ಮನೆ ಕೆಲಸ ಮಾಡುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಹಲ್ಲೆ ಮಾಡಿದ್ದ ಹುಸೇನ್ ದಂಪತಿ ಆಕೆಯ ಕೈಯನ್ನು ಸುಟ್ಟುಹಾಕಿದ್ದರು. ಪ್ರಕರಣ ಬೆಳಕಿಗೆ ಬಂದ ಬಳಿಕ ದಂಪತಿಗಳು ನಾಪತ್ತೆಯಾಗಿದ್ದರು.

29 ವಷ೯ದ ಹುಸೇನ್, ಬಾ೦ಗ್ಲಾದೇಶ ಪರ 38 ಟೆಸ್ಟ್ ಹಾಗೂ 51 ಅ೦ತಾರಾಷ್ಟ್ರೀಯ ಏಕದಿನ ಪ೦ದ್ಯಗಳನ್ನಾಡಿದ್ದಾರೆ. ವಿಚಾರಣೆ ಆರ೦ಭವಾಗುವವರೆಗೂ ಕೋಟ್‍೯, ಹುಸೇನ್ ಹಾಗೂ ಪತ್ನಿ  ಜಾಸ್ಮಿನ್ ಜಾಹನ್‍ಗೆ ಜಾಮೀನು ನೀಡಿದೆ. ಬಾಲಕಿ ಮೇಲೆ ಹಲ್ಲೆ ಆರೋಪ ಕೇಳಿ ಬ೦ದ ಹಿನ್ನೆಲೆಯಲ್ಲಿ ಬಾ೦ಗ್ಲಾದೇಶ ಕ್ರಿಕೆಟ್ ಮ೦ಡಳಿ (ಬಿಸಿಬಿ) ಕಳೆದ ಸೆಪ್ಟೆ೦ಬರ್ 13ರಂದು ಹುಸೇನ್‍ರನ್ನು  ಎಲ್ಲ ಮಾದರಿಯ ಕ್ರಿಕೆಟ್‍ನಿ೦ದ ಅಮಾನತು ಮಾಡಿತ್ತು.

SCROLL FOR NEXT