ದೋಹಾ: ವಿಶ್ವದ ನಂಬರ್ 1 ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ರ ಸತತ 42ನೇ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
ಕತಾರ್ ಓಪನ್ ಕ್ವಾರ್ಟರ್ಫೈನಲ್ನಲ್ಲಿ ರಷ್ಯಾ ಜೋಡಿ ಎಲೆನಾ ವೆನ್ನಿನಾ ಮತ್ತು ಡಾರಿಕಾ ಕಸ್ತಾಕಿನಾ ಜೋಡಿ ಸಾನಿಯಾ ಹಾಗೂ ಹಿಂಗೀಸ್ ಜೋಡಿಯನ್ನು ಮಣಿಸುವ ಮೂಲಕ ಸತತ 42ನೇ ಗೆಲುವಿಗೆ ಬ್ರೇಕ್ ಹಾಕಿದ್ದಾರೆ. ಇದರಿಂದ 1990ರಲ್ಲಿ ಸತತ 44 ಪಂದ್ಯ ಜಯಿಸಿದ ಜಾನಾ ನೊವೊಟ್ನಾ ಮತ್ತು ನತಾಶಾ ಜೆವೆರೆವಾ ಜೋಡಿ ದಾಖಲೆ ಹಿಂದಿಕ್ಕುವ ಸಾನ್ಟಿನಾ ಆಸೆ ಕೈಗೂಡಲಿಲ್ಲ.
ಸಾನಿಯಾ, ಹಿಂಗೀಸ್ ಜೋಡಿ 2-6, 6-4, 10-5 ರಿಂದ ರಷ್ಯಾ ಜೋಡಿ ಎಲೆನಾ ವೆಸ್ನಿನಾ ಮತ್ತು ಡಾರಿಯಾ ಕಸ್ತಾಕಿನಾ ಜೋಡಿ ಎದುರು ಸೋಲನುಭವಿಸಿತು.