ಚೆನ್ನೈ: ಕಳೆದ ವರ್ಷ ಪ್ರಮುಖ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದ ಸೋಮ್ದೆವ್ ದೇವ್‍ವರ್ಮನ್, ಈ ಬಾರಿಯ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಮುಖ್ಯ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಭಾನುವಾರ ನಡೆದ ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಪ್ರಮುಖ ಸಿಂಗಲ್ಸ್ ಆಟಗಾರ ಸೋಮ್ದೇವ್, ತಮ್ಮ ಪ್ರತಿಸ್ಪರ್ಧಿ ಬ್ರಿಟನ್‍ನ ಜೇಮ್ಸ್ ವಾರ್ಡ್ ಅವರನ್ನು 2-6, 7-5,
6-4 ಸೆಟ್‍ಗಳ ಅಂತರದಿಂದ ಜಯಿಸಿದರು. ಸುದೀರ್ಘ ಎರಡು ಗಂಟೆ 3 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೋಮ್ದೇವ್ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು.
ಮೊದಲ ಸೆಟ್‍ನಲ್ಲಿ ವಾರ್ಡ್ ವಿರುದ್ಧ ನಿಯಂತ್ರಣ ಸಾಧಿಸಲು ವಿಫಲರಾದ ಸೋಮ್, 2-6ರ ಹಿನ್ನಡೆ ಅನುಭವಿಸಿದರು. ನಂತರ ಹೇರಾಟ ನಡೆಸಿದ ಸ್ಥಳೀಯ ಆಟಗಾರ ಅಂತಿಮ ಎರಡು ಸೆಟ್‍ಗಳಲ್ಲಿ ಕ್ರಮವಾಗಿ 7-5, 6-4 ಸೆಟ್‍ಗಳಿಂದ ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆ ಮೂಲಕ ರಾಮ್ಕಮಾರ್ ರಾಮನಾಥನ್ ಅವರೊಂದಿಗೆ ಪುರುಷರ ಸಿಂಗಲ್ಸ್ ವಿಭಾಗದ ಪ್ರಮುಖ ಸುತ್ತಿಗೆ ತೆರಳಿದ್ದಾರೆ. ಇನ್ನು ಪುರುಷರ ಡಬಲ್ಸ್‍ನಲ್ಲಿ ಭಾರತದ ಖ್ಯಾತನಾಮರಾದ ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ ಮತ್ತು ಮಹೇಶ್ ಭೂಪತಿ ಮತ್ತೆ ಕಣಕ್ಕಿಳಿಯುತ್ತಿರುವುದು ಭಾರತದ ಭರವಸೆ ಹೆಚ್ಚಿಸಿದೆ.